ಶಿಲ್ಲಾಂಗ್: ಮೇಘಾಲಯದ ಏಕೈಕ ಕಾಂಗ್ರೆಸ್ ಶಾಸಕ ರೋನಿ ವಿ. ಲಿಂಗ್ಡೊ ಅವರು ಬುಧವಾರ ಆಡಳಿತರೂಢ ನ್ಯಾಷನಲ್ ಪೀಪಲ್ಸ್ ಪಕ್ಷಕ್ಕೆ(ಎನ್ಪಿಪಿ) ಸೇರ್ಪಡೆಗೊಂಡಿದ್ದಾರೆ.

ಲಿಂಗ್ಡೊ ಅವರು ಮೈಲಿಯೆಮ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಸ್ಪೀಕರ್ ಥಾಮಸ್ ಎ. ಸಂಗ್ಮಾ ಅವರನ್ನು ಭೇಟಿಯಾದ ಅವರು ಎನ್ಪಿಪಿ ಸೇರ್ಪಡೆಗೊಳ್ಳುವ ಬಗ್ಗೆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ. ಈ ವೇಳೆ ಅವರೊಂದಿಗೆ ಉಪಮುಖ್ಯಮಂತ್ರಿ ಸ್ನಿಯವ್ಭಲಾಂಗ್ ಧಾರ್ ಸೇರಿದಂತೆ ಹಿರಿಯ ಎನ್ಪಿಪಿ ನಾಯಕರು ಇದ್ದರು.

‘ಲಿಂಗ್ಡೊ ಅವರು ಇಂದು ಔಪಚಾರಿಕವಾಗಿ ಎನ್ಪಿಪಿ ಸೇರ್ಪಡೆಯಾಗಿದ್ದಾರೆ’ ಎಂದು ಧಾರ್ ಹೇಳಿದ್ದಾರೆ.

2023 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 5 ಸ್ಥಾನಗಳನ್ನು ಗೆದ್ದಿತ್ತು. ಅವರಲ್ಲಿ ಒಬ್ಬರಾದ ಸಲೆಂಗ್ ಎ. ಸಂಗ್ಮಾ ಅವರು ತುರಾ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಇತರ ಮೂವರು ಕಳೆದ ವರ್ಷ ಎನ್ಪಿಪಿ ಸೇರಿದ್ದಾರೆ.

ಲಿಂಗ್ಡೊ ಸೇಪರ್ಡೆ ನಂತರ ವಿಧಾನಸಭೆಯಲ್ಲಿ ಎನ್ಪಿಪಿ ಬಲ 32ಕ್ಕೆ ಏರಿಕೆಯಾಗಿದೆ. 60 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ ತನ್ನ ಪ್ರಾತಿನಿಧ್ಯವನ್ನು ಕಳೆದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.