ಠಾಣೆ, ಮಹಾರಾಷ್ಟ್ರ: ನಗರದ ಹೊರವಲಯದಲ್ಲಿ ಅಂತರರಾಜ್ಯ ಮಾದಕ ಪದಾರ್ಥಗಳ ಮಾರಾಟ ಜಾಲವನ್ನು ಭೇದಿಸಿರುವ ಮುಂಬ್ರಾ ಪೊಲೀಸರು ₹27 ಕೋಟಿ ಮೌಲ್ಯದ 13.6 ಕೆ.ಜಿ ಮೆಫೆಡ್ರೊನ್ ವಶಕ್ಕೆ ಪಡೆದಿದ್ದಾರೆ.

ಠಾಣೆ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ನಡೆದ ಅತೀ ದೊಡ್ಡ ಡ್ರಗ್ಸ್ ಪತ್ತೆ ಕಾರ್ಯ ಇದಾಗಿದೆ.

‘ಖಚಿತ ಮಾಹಿತಿ ಆಧರಿಸಿ ಮುಂಬ್ರಾ ಪೊಲೀಸ್ ಠಾಣೆಯ ಎನ್ಡಿಪಿಎಸ್ ತಂಡವು ಆಸ್ಪತ್ರೆಯೊಂದರ ಸುತ್ತ ನಿಗಾ ವಹಿಸಿತ್ತು. ಈ ವೇಳೆ ಬಸು ಉಮರ್ದಿನ್ ಸಯೆದ್ ಅವರನ್ನು ಬಂಧಿಸಿ 23.5 ಗ್ರಾಂ ಮೆಫೆಡ್ರೊನ್ ವಶಕ್ಕೆ ಪಡೆದರು’ ಎಂದು ಡಿಸಿಪಿ ಸುಭಾಶ್ ಬರ್ಸೆ ತಿಳಿಸಿದರು.

‘ನಮ್ಮ ವಿಚಾರಣೆ ವೇಳೆ ಮಧ್ಯಪ್ರದೇಶದಿಂದ ಠಾಣೆಗೆ ನೇರವಾಗಿ ಇದನ್ನು ಪೂರೈಸಲಾಗುತ್ತಿತ್ತು ಎಂದು ಮಾಹಿತಿ ಸಿಕ್ಕಿತ್ತು. ಸೈಯದ್ ವಿಚಾರಣೆ ವೇಳೆ ನೀಡಿದ ಮಾಹಿತಿಯಂತೆ ಮಧ್ಯಪ್ರದೇಶದ ರಾಮ್ ಸಿಂಗ್ ಅಮರ್ ಸಿಂಗ್ ಗುಜ್ಜರ್(40) ಹಾಗೂ ಕೈಲಾಸ್ ಶಂಭುಲಾಲ್ ಬಲಾಯಿ(36) ಅವರನ್ನು ಬಂಧಿಸಿ ₹7.30 ಕೋಟಿ ಮೌಲ್ಯದ ಮೆಫೆಡ್ರೊನ್ ವಶಕ್ಕೆ ಪಡೆಯಲಾಯಿತು. ನಂತರ ನಮ್ಮ ತಂಡವು ರತ್ಲಾಂಗೆ ತೆರಳಿ ಮನೋಹರ್ ಲಾಲ್ ರಂಗ್ಲಾಲ್, ರಿಯಾಜ್ ಮೊಹಮ್ಮದ್ನನ್ನು ಬಂಧಿಸಿ ₹19.91 ಕೋಟಿ ಮೌಲ್ಯದ ಮೆಫೆಡ್ರೊನ್ ವಶಕ್ಕೆ ಪಡೆದಿದೆ’ ಎಂದು ಮಾಹಿತಿ ನೀಡಿದರು.

ಐದು ಮಂದಿಯ ವಿರುದ್ಧ ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿವೆ. ಆರೋಪಿಗಳ ವಿರುದ್ಧ ಎನ್ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸುಭಾಶ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.