ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಿಗ್‌–29’ ಯುದ್ಧ ವಿಮಾನಕ್ಕೆ ಇನ್ನಷ್ಟು ಬಲ

Last Updated 7 ಅಕ್ಟೋಬರ್ 2018, 18:19 IST
ಅಕ್ಷರ ಗಾತ್ರ

ಆದಮ್‌ಪುರ/ಜಲಂಧರ್: ಭಾರತೀಯ ವಾಯುಪಡೆಯಲ್ಲಿ ಮುಂಚೂಣಿಯಲ್ಲಿರುವ ರಷ್ಯಾ ನಿರ್ಮಿತ ‘ಮಿಗ್‌ –29’ ಯುದ್ಧ ವಿಮಾನಗಳಿಗೆ ಅತ್ಯಾಧುನಿಕ ಯುದ್ಧ ಸೌಲಭ್ಯಗಳನ್ನು ಅಳವಡಿಸುವ ಮೂಲಕ ಮೇಲ್ದರ್ಜೆಗೆ ಏರಿಸಲಾಗಿದೆ.

ಆಗಸದಲ್ಲಿಯೇ ಇಂಧನ ತುಂಬುವ ಸೌಲಭ್ಯವನ್ನು ಹೊಸದಾಗಿ ಅಳವಡಿಸಲಾಗಿದೆ. ಅಷ್ಟೇ ಅಲ್ಲ, ಅತ್ಯಾಧುನಿಕ ಕ್ಷಿಪಣಿ ಅಳವಡಿಸುವ ಮೂಲಕ ಬಹು ಹಂತದಲ್ಲಿ ದಾಳಿ ನಡೆಸುವ ಸಾಮರ್ಥ್ಯ ಹೆಚ್ಚಿಸಲಾಗಿದೆ.

ಇದರಿಂದಾಗಿ ಯುದ್ಧ ವಿಮಾನಗಳ ಕೊರತೆ ಎದುರಿಸುತ್ತಿರುವ ಭಾರತೀಯ ವಾಯುಪಡೆಯ ಬತ್ತಳಿಕೆಯ ಬಲ ಮತ್ತಷ್ಟು ಹೆಚ್ಚಿದಂತಾಗಿದೆ.

ಮೇಲ್ದರ್ಜೆಗೇರಿಸಲಾದ ಮಿಗ್‌ –29 ಯುದ್ಧ ವಿಮಾನಗಳ ಯುದ್ಧ ಸಾಮರ್ಥ್ಯವನ್ನು ಕಳೆದ ವಾರ ಆದಮ್‌ಪುರ ವೈಮಾನಿಕ ಕೇಂದ್ರದಲ್ಲಿ ಪ್ರದರ್ಶಿಸಲಾಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

ಪಾಕಿಸ್ತಾನದ ಗಡಿಯಿಂದ ನೂರು ಕಿ.ಮೀ ಮತ್ತು ಚೀನಾ ಗಡಿಯಿಂದ 250 ಕಿ.ಮೀ ಅಂತರದಲ್ಲಿರುವ ಆದಮ್‌ಪುರ ವೈಮಾನಿಕ ಕೇಂದ್ರದಲ್ಲಿ 32ಕ್ಕೂ ಹೆಚ್ಚು ಮಿಗ್‌ ಯುದ್ಧ ವಿಮಾನಗಳಿವೆ.

ಹಳೆಯ ಮಿಗ್‌–29 ಯುದ್ಧ ವಿಮಾನಗಳಿಗೆ ಹೋಲಿಸಿದರೆ ಮೇಲ್ದರ್ಜೆಗೆ ಏರಿಸಲಾದ ಮಿಗ್‌ ಶಕ್ತಿ ದುಪ್ಪಟ್ಟಾಗಿದೆ ಎಂದು ವಾಯುಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

ನೆಲದಿಂದ ಲಂಬವಾಗಿ ಆಗಸಕ್ಕೆ ನೆಗೆಯುವ ವಿಶಿಷ್ಟ ಸಾಮರ್ಥ್ಯ ಹೊಂದಿರುವ ಈ ವಿಮಾನಗಳ ಸೇರ್ಪಡೆಯಿಂದ ಭಾರತೀಯ ವಾಯುಪಡೆಯ ಶಕ್ತಿ ಮತ್ತಷ್ಟು ಹೆಚ್ಚಿದೆ ಎಂದು ಲೆಫ್ಟಿನೆಂಟ್ ಕರ್ನಲ್‌ ಕರಣ್‌ ಕೊಹ್ಲಿ ತಿಳಿಸಿದ್ದಾರೆ.

ಸಮಯ, ಸಂದರ್ಭಕ್ಕೆ ತಕ್ಕಂತೆ ಈ ವಿಮಾನಗಳನ್ನು ಬಳಸಿಕೊಳ್ಳಬಹುದಾಗಿದೆ. ವೈರಿ ವಿಮಾನವನ್ನು ಪತ್ತೆ ಹಚ್ಚಿದ ಐದು ನಿಮಿಷಗಳ ಒಳಗಾಗಿ ಅದರ ಮೇಲೆ ಎರಗಿ ದಾಳಿ ನಡೆಸುವಷ್ಟು ಸಾಮರ್ಥ್ಯ ಹೊಂದಿವೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT