ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿಪುರ: ಜೈಲಿನಿಂದ ಕೈದಿ ಪರಾರಿ

Published 14 ಮೇ 2024, 15:24 IST
Last Updated 14 ಮೇ 2024, 15:24 IST
ಅಕ್ಷರ ಗಾತ್ರ

ಅಗರ್ತಲಾ: ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ನಿಷೇಧಿತ ‘ನ್ಯಾಷನಲ್ ಲಿಬರೇಷನ್ ಫ್ರಂಟ್ ಆಫ್ ತ್ರಿಪುರ’ ಸಂಘಟನೆಯ ಸದಸ್ಯ ತ್ರಿಪುರದಲ್ಲಿರುವ ಸಿಪಾಹಿಜಲಾ ಜಿಲ್ಲೆಯಲ್ಲಿರುವ ಕೇಂದ್ರೀಯ ಕಾರಾಗೃಹದಿಂದ ತಪ್ಪಿಸಿಕೊಂಡಿದ್ದಾನೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. 

ಆತ ಹೇಗೆ ತಪ್ಪಿಸಿಕೊಂಡಿರಬಹುದು ಎಂಬುದರ ಪರಿಶೀಲನೆಗಾಗಿ ಸಿ.ಸಿ.ಟಿ.ವಿ. ಕ್ಯಾಮೆರಾಗಳ ಪರಿಶೀಲನೆ ನಡೆಸಲಾಗಿದೆ. ಆತ ಬೆಳಗಿನ ಜಾವ ತಪ್ಪಿಸಿಕೊಂಡಿರಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ. 

ಮಂಗಳವಾರ ಬೆಳಿಗ್ಗೆ ಕಾರಾಗೃಹದಲ್ಲಿರುವ ಕೈದಿಗಳ ಲೆಕ್ಕಾಚಾರದ ವೇಳೆ ಸ್ವರ್ಣ ಕುಮಾರ್ ತ್ರಿಪುರ ಜೈಲಿನಿಂದ ನಾಪತ್ತೆಯಾಗಿರುವುದು ಗೊತ್ತಾಗಿದೆ ಎಂದು ಸಿಪಾಹಿಜಲಾ ಜಿಲ್ಲಾ ಮ್ಯಾಜಿಸ್ಟ್ರೇಟ್ ನಾಗೇಶ್ ಕುಮಾರ್ ತಿಳಿಸಿದ್ದಾರೆ. 

ದಕ್ಷಿಣ ತ್ರಿಪುರದ ಸಾಂತ್ರಿಬಜಾರ್ ಪ್ರದೇಶದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಸ್ವರ್ಣ ಕುಮಾರ್ ಬಂಧನವಾಗಿತ್ತು. ಆತ ತಪ್ಪಿಸಿಕೊಂಡಿರುವ ಬಗ್ಗೆ ಎಲ್ಲಾ ಠಾಣೆಗಳಿಗೆ ಮಾಹಿತಿ ನೀಡಲಾಗಿದ್ದು, ಆತನ ಬಂಧನಕ್ಕಾಗಿ ತೀವ್ರ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ನಾಗೇಶ್ ಕುಮಾರ್ ತಿಳಿಸಿದ್ದಾರೆ. 

ಈ ಉಗ್ರ 2016ರಲ್ಲಿ ಕೇಂದ್ರ ಕಾರಾಗೃಹ ಮತ್ತು 2022ರಲ್ಲಿ ಕಾಂಚನ್‌ಪುರದಲ್ಲಿರುವ ಉಪ ಕಾರಾಗೃಹದಿಂದಲೂ ತಪ್ಪಿಸಿಕೊಂಡಿದ್ದ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT