ನವದೆಹಲಿ: ಕೂದಲು ಉದುರುವಿಕೆ ತಡೆಯಲು ತಾಯಂದಿರು (ಗರ್ಭಿಣಿ, ಬಾಣಂತಿ) ತಲೆಗೆ ಹಚ್ಚಿಕೊಳ್ಳುವ ಮಿನೊಕ್ಸಿಡಿಲ್ ಲೇಪನ ಶಿಶುವಿನಲ್ಲಿ ಕೂದಲಿನ ಅಸಹಜ ಬೆಳವಣಿಗೆಯ ಸಮಸ್ಯೆ ತಂದೊಡ್ಡಬಹುದು ಎಂದು ತಜ್ಞರ ಅಧ್ಯಯನವೊಂದು ಬಹಿರಂಗ ಪಡಿಸಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್) ತಜ್ಞರು ಮಿನೊಕ್ಸಿಡಿಲ್ನಿಂದ ಇನ್ಫೆಂಟೈಲ್ ಹೈಪರ್ಟ್ರಿಕೋಸಿಸ್ (ಕೂದಲು ಬೆಳೆಯದಂತಹ ದೇಹದ ಭಾಗದಲ್ಲೂ ಕೂದಲು ಬರುವ ಸಮಸ್ಯೆ) ಕಾಣಿಸಿಕೊಂಡಿರುವ ವಿಶ್ವದ 2,664 ಪ್ರಕರಣಗಳನ್ನು ವಿಶ್ಲೇಷಿಸಿದ್ದರು. ಇದರಲ್ಲಿ 23 ತಿಂಗಳ ಒಳಗಿನ 45 ಶಿಶುಗಳಲ್ಲಿ ಸಮಸ್ಯೆ ಇರುವುದು ಪತ್ತೆಯಾಗಿದೆ.

45 ಪ್ರಕರಣಗಳ ಪೈಕಿ ಶೇ 22ರಷ್ಟು ಗರ್ಭಾವಸ್ಥೆಯಲ್ಲಿ ಮಿನೊಕ್ಸಿಡಿಲ್ ಬಳಕೆಯಿಂದ ಬಂದಿವೆ, ಶೇ 44.4ರಷ್ಟು ಆಕಸ್ಮಿಕ ಬಳಕೆ ಮತ್ತು ಶೇ 33.3ರಷ್ಟು ಪ್ರಕರಣಗಳಲ್ಲಿ ಅಪರಿಚಿತ ಕಾರಣ ಪತ್ತೆಯಾಗಿದೆ ಎಂಬ ಅಧ್ಯಯನದ ಅಂಶಗಳನ್ನು ಚರ್ಮವೈದ್ಯ ಸಂಶೋಧನಾ ಪತ್ರಿಕೆಯು ಪ್ರಕಟಿಸಿದೆ.

ಭಾರತದ 25 ಪ್ರಕರಣ ಸೇರಿ ವಿಶ್ವದ 1,669 ಪ್ರಕರಣಗಳನ್ನು ವಿಶ್ಲೇಷಿಸಿದಾಗ ಕಣ್ಣಿನ ಊತ, ದೃಷ್ಟಿ ಮಬ್ಬಾಗುವಿಕೆ (ಅಸ್ಪಷ್ಟತೆ), ಪೊರೆಯು ರಕ್ತಗಟ್ಟುವುದು, ರೆಟಿನಾದಲ್ಲಿ (ಅಕ್ಷಿಪಟ) ಸ್ರವಿಸುವಿಕೆ ಉಂಟಾಗಿ ದೃಷ್ಟಿದೋಷ ಕಾಣಿಸಿಕೊಂಡಿದೆ.

‘ಅಧಿಕ ರಕ್ತದೊತ್ತಡ ನಿಯಂತ್ರಕವಾಗಿ ಮಿನೊಕ್ಸಿಡಿಲ್ ಅನ್ನು ಅಭಿವೃದ್ಧಿಪಡಿಸಲಾಗಿತ್ತು. ಆನಂತರ ಬೊಕ್ಕತಲೆಯ ಚಿಕಿತ್ಸೆಗೆ ಔಷಧವಾಗಿ ಮರು ರೂಪಿಸಲಾಯಿತು. ಕೂದಲುರಹಿತ ಚರ್ಮಕ್ಕೆ ನೇರವಾಗಿ ಲೇಪಿಸಿದರೆ ಕೂದಲು ಬರುತ್ತದೆ ಎಂಬ ಕಾರಣಕ್ಕೆ ಬಳಕೆ ಹೆಚ್ಚಾಯ್ತು. ಇದೀಗ ಅದರ ಅಡ್ಡ ಪರಿಣಾಮಗಳನ್ನು ಕಾಣುತ್ತಿದ್ದೇವೆ’ ಎಂದು ತಜ್ಞರು ಹೇಳಿದ್ದಾರೆ.

‘ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರು ಬಳಸಬಾರದು ಎಂಬ ಶಿಫಾರಸುಗಳಿದ್ದರೂ ನಿಯಂತ್ರಣವಿಲ್ಲದೇ ಕೂದಲು ಉದುರುವಿಕೆ ನಿರೋಧಕವನ್ನಾಗಿ ಬಳಸಲಾಗುತ್ತಿದೆ. ಇದರಿಂದ ಶಿಶುಗಳಲ್ಲಿ ಅಸಹಜ ಕೂದಲು ಬೆಳವಣಿಗೆ ಕಾಣುತ್ತಿದ್ದೇವೆ’ ಎಂದು ತಜ್ಞರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.