ಹೈದರಾಬಾದ್: ಹೈದರಾಬಾದ್ ಸೇರಿದಂತೆ ರಾಜ್ಯದ ಪ್ರಮುಖ ಸಾಂಸ್ಕೃತಿಕ ನಗರಗಳಲ್ಲಿ ‘ಮಿಸ್ ವರ್ಲ್ಡ್’ (ವಿಶ್ವ ಸುಂದರಿ) ಸ್ಪರ್ಧೆಯ 72ನೇ ಆವೃತ್ತಿಯು ಆರಂಭಗೊಂಡಿದೆ. ದೇಶ–ವಿದೇಶಗಳಲ್ಲಿ ಸ್ಪರ್ಧಿಗಳು ಭೇಟಿ ಭಾಗವಹಿಸಿದ್ದು, ಹಲವು ಪ್ರದೇಶಗಳಲ್ಲಿ ಡ್ರೋನ್ ಹಾರಾಟ ನಿಷೇಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಿಮೋಟ್ ಕಂಟ್ರೋಲ್ಡ್ ಡ್ರೋನ್ಗಳು, ಪ್ಯಾರಾ ಗ್ಲೈಡರ್ಗಳು ಸೇರಿದಂತೆ ಮೈಕ್ರೋ-ಲೈಟ್ ಏರ್ಕ್ರಾಫ್ಟ್ಗಳ ಹಾರಾಟವನ್ನು ನಿರ್ದಿಷ್ಟ ಅವಧಿಗೆ ಮೂರು ಕಿಲೋಮೀಟರ್ ವ್ಯಾಪ್ತಿವರೆಗೆ ನಿಷೇಧಿಸಲಾಗಿದೆ ಎಂದು ಹೈದರಾಬಾದ್ ಪೊಲೀಸ್ ಆಯುಕ್ತ ಸಿ.ವಿ. ಆನಂದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

120 ದೇಶಗಳಿಂದ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಲು ಮೇ 7ರಂದು ರೂಪದರ್ಶಿಯರು ಬಂದಿದ್ದಾರೆ. ಸ್ಪರ್ಧಿಗಳ ಸುರಕ್ಷತೆ ಮತ್ತು ಭದ್ರತೆ ದೃಷ್ಟಿಯಿಂದ ಹಲವು ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಆನಂದ್ ಹೇಳಿದ್ದಾರೆ.

ಮೇ 10ರಿಂದ ಮೇ 31ರ ಅವಧಿಯಲ್ಲಿ ರಾಜ್ಯದ ವಿವಿಧೆಡೆ ವಿಶ್ವ ಸುಂದರಿ ಸ್ಪರ್ಧೆಯು ಕೆಲವು ಹಂತಗಳಲ್ಲಿ ನಡೆಯಲಿದೆ. ಹೈದರಾಬಾದ್ನಲ್ಲಿ ಸ್ಪರ್ಧೆಯ ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭಗಳು ನಿಗದಿಯಾಗಿವೆ. ಮೇ 31ರಂದು ವಿಶ್ವ ಸುಂದರಿ ಕಿರೀಟ ಯಾರಿಗೆ ಎನ್ನುವುದು ಗೊತ್ತಾಗಲಿದೆ.

‘ಮಿಸ್ ವರ್ಲ್ಡ್’ ಸ್ಪರ್ಧೆಗೆ ಸುಮಾರು ₹54 ಕೋಟಿ ವೆಚ್ಚವಾಗಬಹುದೆಂದು ಅಂದಾಜಿಸಲಾಗಿದೆ ಎಂದು ತೆಲಂಗಾಣದ ಪ್ರವಾಸೋದ್ಯಮ ಸಚಿವ ಜುಪಲ್ಲಿ ಕೃಷ್ಣ ರಾವ್ ತಿಳಿಸಿದ್ದಾರೆ.

ರಾಜ್ಯ ಪ್ರವಾಸೋದ್ಯಮ ಇಲಾಖೆ ಮತ್ತು ‘ಮಿಸ್ ವರ್ಲ್ಡ್ ಲಿಮಿಟೆಡ್’ ಪಾಲುದಾರಿಕೆಯಲ್ಲಿ ಸ್ಪರ್ಧೆ ನಡೆಯಲಿದ್ದು, ಇವೆರಡೂ ಸಮಾನವಾಗಿ ಖರ್ಚುವೆಚ್ಚವನ್ನು ಹಂಚಿಕೊಳ್ಳುತ್ತವೆ ಎಂದು ಅವರು ಮಾಹಿತಿ ನೀಡಿದ್ದಾರೆ.
.ವಿಶ್ವ ಸುಂದರಿ ಸ್ಪರ್ಧೆ: ಈ ಬಾರಿಯೂ ಪಾಕ್ ಗೈರು.ವಿಶ್ವ ಸುಂದರಿ ಸ್ಪರ್ಧೆ: ಕಾರ್ಯಕ್ರಮದ ಮೂಲಕ ಹೂಡಿಕೆ ಆಕರ್ಷಿಸಲು ತೆಲಂಗಾಣ ಸಿದ್ಧತೆ.ತೆಲಂಗಾಣದಲ್ಲಿ ಮೇ ತಿಂಗಳಲ್ಲಿ ವಿಶ್ವ ಸುಂದರಿ ಸ್ಪರ್ಧೆ.PHOTOS | ವಿಶ್ವ ಸುಂದರಿ ಸ್ಪರ್ಧೆ: 22 ವರ್ಷದ ಉಡುಪಿ ಚೆಲುವೆ ಸಿನಿ ಶೆಟ್ಟಿ ಮಿಂಚು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.