ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಬರ್ ಪ್ಲೇಟ್ ಇಲ್ಲದ ಬೈಕ್‌ಲಿ ಪರಾರಿಯಾಗಲು ಯತ್ನ: ಯುವ ಪ್ರೇಮಿಗಳು ಪೊಲೀಸ್ ಬಲೆಗೆ

Last Updated 1 ಮೇ 2022, 11:16 IST
ಅಕ್ಷರ ಗಾತ್ರ

ಥಾಣೆ: ಮಧ್ಯಪ್ರದೇಶದ ಯುವಪ್ರೇಮಿಗಳಿಬ್ಬರು ಮನೆ ಬಿಟ್ಟು ಪರಾರಿಯಾಗುತ್ತಿದ್ದಾಗ ಮಹಾರಾಷ್ಟ್ರ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ.

ಕಳೆದ ವಾರ ಮಧ್ಯಪ್ರದೇಶದ ಭಿಂದ್ ಜಿಲ್ಲೆಯಿಂದ ರಾಮ್‌ಕರಣ್ ಹಾಗೂ ಫರ್ವಿನ್ ಎನ್ನುವವರು ಮನೆ ಬಿಟ್ಟು ಪರಾರಿಯಾಗಿದ್ದರು. ಈ ಕುರಿತು ಹುಡುಗಿ ಕುಟುಂಬದವರು ಭಿಂದ್ ಜಿಲ್ಲೆಯಲ್ಲಿ ದೂರು ದಾಖಲಿಸಿದ್ದರು.

ತಲಾ 18 ವರ್ಷದ ಈ ಯುವಪ್ರೇಮಿಗಳ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದರು. ಆದರೆ, ಪ್ರೇಮಿಗಳು ಬೈಕ್‌ಗೆ ನಂಬರ್ ಪ್ಲೇಟ್ ಇಲ್ಲದೇ ಮಹಾರಾಷ್ಟ್ರದ ಥಾಣೆ ಬಳಿ ಹೋಗುತ್ತಿದ್ದಾಗ ಆನಂದ ನಗರ್ ಟೋಲ್ ಪ್ಲಾಜಾ ಬಳಿ ನವಗರ್ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.

ಈ ಇಬ್ಬರೂ ಯುವಪ್ರೇಮಿಗಳನ್ನು ಮಧ್ಯಪ್ರದೇಶ ಪೊಲೀಸರಿಗೆ ಒಪ್ಪಿಸುವ ಪ್ರಕ್ರಿಯೆ ನಡೆದಿದೆ ಎಂದು ನವಗರ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಅವರು ಪಿಟಿಐಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT