ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Mizoram Result: ಎಂಎನ್‌ಎಫ್‌ಗೆ ಆಘಾತ; ಅಧಿಕಾರಕ್ಕೇರಿದ ಜೆಡ್‌ಪಿಎಂ

Published 4 ಡಿಸೆಂಬರ್ 2023, 2:19 IST
Last Updated 4 ಡಿಸೆಂಬರ್ 2023, 10:15 IST
ಅಕ್ಷರ ಗಾತ್ರ

Election Result Live: ಮಿಜೋರಾಂ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಆಡಳಿತದಲ್ಲಿದ್ದ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್ಎಫ್) ಅಧಿಕಾರ ಕಳೆದುಕೊಂಡಿದೆ. ಹೊಸ ಪ್ರಾದೇಶಿಕ ಪಕ್ಷ ಜೋರಾಂ ಪೀಪಲ್ಸ್ ಮೂವ್‌ಮೆಂಟ್ (ಜೆಡ್‌ಪಿಎಂ) 27 ಸ್ಥಾನಗಳನ್ನು ಗೆದ್ದುಕೊಳ್ಳುವ ಮೂಲಕ 40 ಸ್ಥಾನಗಳುಳ್ಳ ವಿಧಾನಸಭೆಯಲ್ಲಿ ಬಹುಮತ ಸಾಧಿಸಿದೆ.

ಅಧಿಕಾರಾರೂಢ ಎಂಎನ್ಎಫ್ ಆಘಾತ ಅನುಭವಿಸಿದ್ದು, 9 ಸ್ಥಾನಗಳಲ್ಲಿ ಗೆದ್ದಿದೆ. ಉಳಿದಂತೆ ಬಿಜೆಪಿ 2 ಹಾಗೂ ಕಾಂಗ್ರೆಸ್ 1 ಸ್ಥಾನದಲ್ಲಿ ವಿಜಯ ಸಾಧಿಸಿದೆ. 1 ಸ್ಥಾನದ ಮತಎಣಿಕೆ ಮುಂದುವರಿದಿದ್ದು, ಅದರಲ್ಲಿ ಎಂಎನ್ಎಫ್ ಮುನ್ನಡೆಯಲ್ಲಿದೆ.

ಬಿಜೆಪಿಯು 2018ರಲ್ಲಿ 1 ಸ್ಥಾನದಲ್ಲಿ ಗೆದ್ದಿದ್ದು, ಈ ಬಾರಿ ಒಂದು ಸ್ಥಾನ ಹೆಚ್ಚಿಸಿಕೊಂಡಿದೆ.

ಈ ಮಧ್ಯೆ, ಐಝ್ವಾಲ್‌ ಪೂರ್ವ–1 ಕ್ಷೇತ್ರದಿಂದ ಸ್ಪರ್ಧಿಸಿದ್ದ ಮುಖ್ಯಮಂತ್ರಿ ಎಂಎನ್‌ಎಫ್‌ನ ಜೋರಮತಂಗಾ ಅವರು 2100 ಮತಗಳಿಂದ ಪರಾಭವಗೊಂಡಿದ್ದಾರೆ.

12 ಗಂಟೆಗೆ: ಹಿನ್ನಡೆಯಲ್ಲಿ ಸಿಎಂ, ಡಿಸಿಎಂಗೆ ಸೋಲು

ಮಧ್ಯಾಹ್ನ 12 ಗಂಟೆ ಟ್ರೆಂಡ್ ಪ್ರಕಾರ, ಮಿಜೋರಾಂ ಮುಖ್ಯಮಂತ್ರಿ ಜೋರಾಮ್‌ತಂಗಾ ಅವರು ಐಜ್ವಾಲ್ ಪೂರ್ವ–1 ಕ್ಷೇತ್ರದಲ್ಲಿ ಜೆಡ್‌ಪಿಎಂ ಅಭ್ಯರ್ಥಿ ಲಾಲ್‌ಥನ್ ಸಂಗಾ ಎದುರು ಹಿನ್ನಡೆ ಅನುಭವಿಸಿದ್ದರು.

26 ಕ್ಷೇತ್ರಗಳಲ್ಲಿ ಜೆಡ್‌ಪಿಎಂ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದು, ಎಂಎನ್‌ಎಫ್ 11, 1ರಲ್ಲಿ ಕಾಂಗ್ರೆಸ್ ಮತ್ತು 2 ಕ್ಞೇತ್ರಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಮುನ್ನಡೆ ದಾಖಲಿಸಿದ್ದಾರೆ.

‘ಈ ಫಲಿತಾಂಶವನ್ನು ನಾನು ನಿರೀಕ್ಷಿಸಿದ್ದೆ’

‘ಈ ಫಲಿತಾಂಶವನ್ನು ನಾನು ನಿರೀಕ್ಷಿಸಿದ್ದೆ. ಇದರಲ್ಲಿ ಆಶ್ಚರ್ಯವೇನಿಲ್ಲ. ಮತ ಎಣಿಕೆ ಪ್ರಕ್ರಿಯೆ ಮುಗಿದು ಸಂಪೂರ್ಣ ಫಲಿತಾಂಶ ಬರಲಿ’ಎಂದು ಜೆಡ್‌ಪಿಎಂ ಮುಖ್ಯಮಂತ್ರಿ ಅಭ್ಯರ್ಥಿ ಲಾಲ್ದುಹೋಮ ಹೇಳಿದ್ದಾರೆ,

Mizoram Election Result: ಟುಯಿಚಾಂಗ್ ಕ್ಷೇತ್ರದಲ್ಲಿ ಡಿಸಿಎಂ ತೌನ್ಲುಯಾಗೆ ಸೋಲು

ಜೆಡ್‌ಪಿಎಂ ಭಾರಿ ಮುನ್ನಡೆ

* ಬೆಳಿಗ್ಗೆ 10 ಗಂಟೆಯ ಟ್ರೆಂಡ್ ಪ್ರಕಾರ, ಮಿಜೋರಾಂನಲ್ಲಿ ಜೆಡ್‌ಪಿಎಂ ಪಕ್ಷವು 27 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದರೆ, ಎಂಎನ್‌ಎಫ್ 9, ಬಿಜೆಪಿ 3 ಮತ್ತು ಕಾಂಗ್ರೆಸ್ 1 ಕ್ಷೇತ್ರದಲ್ಲಿ ಮುನ್ನಡೆ ದಾಖಲಿಸಿವೆ.

* ಮಿಜೋರಾಂ ವಿಧಾನಸಭೆ ಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು, ಜೆಡ್‌ಪಿಎಂ 7, ಎಂಎನ್‌ಎಫ್ 5, 4ರಲ್ಲಿ ಕಾಂಗ್ರೆಸ್ ಆರಂಭಿಕ ಮುನ್ನಡೆ ಸಾಧಿಸಿದ್ದಾರೆ.

ಮಿಜೋರಾಂ ವಿಧಾನಸಭೆ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ. ರಾಜ್ಯದಾದ್ಯಂತ 13 ಕೇಂದ್ರಗಳಲ್ಲಿ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಿದೆ. ಮಿಜೋರಾಂ ಮತ ಎಣಿಕೆಯೂ ಡಿಸೆಂಬರ್‌ 3ರಂದೇ ನಡೆಯಬೇಕಿತ್ತು. ಕ್ರೈಸ್ತ ಧರ್ಮೀಯರೇ ಹೆಚ್ಚಾಗಿರುವ ರಾಜ್ಯದಲ್ಲಿ ಜನರು ಭಾನುವಾರದಂದು ಧಾರ್ಮಿಕ ಚಟು ವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಮತ ಎಣಿಕೆ ದಿನಾಂಕವನ್ನು ಮುಂದೂಡಬೇಕು ಎಂದು ಸಂಘಟನೆಗಳು ಕೋರಿದ್ದವು.

ನವೆಂಬರ್ 7ರಂದು ಮತದಾನ ನಡೆದಿತ್ತು. ರಾಜ್ಯದಲ್ಲಿ 8.57 ಲಕ್ಷ ಮತದಾರರಿದ್ದು, ಶೇಕಡ 80ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. 18 ಮಹಿಳೆಯರು ಸೇರಿದಂತೆ ಒಟ್ಟು 174 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಎಂಎನ್‌ಎಫ್‌, ಜೆಡ್‌ಪಿಎಂ ಮತ್ತು ಕಾಂಗ್ರೆಸ್ 40 ಸ್ಥಾನಗಳಲ್ಲೂ ಸ್ಪರ್ಧಿಸಿದ್ದರೆ, ಬಿಜೆಪಿ 13 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇಲ್ಲಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಆಮ್ ಆದ್ಮಿ ಪಕ್ಷ (ಎಎಪಿ) ನಾಲ್ಕು ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಅಲ್ಲದೆ, 17 ಮಂದಿ ಸ್ವತಂತ್ರ ಅಭ್ಯರ್ಥಿಗಳಿದ್ದಾರೆ.

Mizoram Exit Poll: ಅತಂತ್ರ ವಿಧಾನಸಭೆಯ ಭವಿಷ್ಯ ನುಡಿದಿರುವ ಸಮೀಕ್ಷೆಗಳು

ನವದೆಹಲಿ: ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್‌ಎಫ್), ವಿರೋಧ ಪಕ್ಷವಾದ ಜೋರಾಮ್ ಪೀಪಲ್ಸ್ ಪಾರ್ಟಿ (ಜೆಡ್‌ಪಿಎಂ) ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆಯನ್ನು ಕಂಡ ಮಿಜೋರಾಂ ರಾಜ್ಯದ ಮತಗಟ್ಟೆ ಸಮಿಕ್ಷೆ ಹೊರಬಿದ್ದಿದ್ದು, ಅತಂತ್ರ ವಿಧಾನಸಭೆಯ ಸೂಚನೆ ಸಿಕ್ಕಿದೆ. 40 ಸದಸ್ಯ ಬಲದ ಮಿಜೋರಾಂ ವಿಧಾನಸಭೆಯಲ್ಲಿ 21 ಸ್ಥಾನ ಪಡೆದವರು ಅಧಿಕಾರದ ಗದ್ದುಗೆ ಏರುತ್ತಾರೆ.

 ಜೋರಾಂ ಪೀಪಲ್ಸ್‌ ಮೂವ್‌ಮೆಂಟ್‌ (ಜೆಡ್‌ಪಿಎಂ) ಹಾಗೂ ಮಿಜೋ ನ್ಯಾಷನಲ್‌ ಫ್ರಂಟ್‌ (ಎಂಎನ್‌ಎಫ್‌) ನಿಕಟ ಸ್ಪರ್ಧೆ ಇದೆ.

ಮಿಜೋರಾಂನಲ್ಲಿ ಮತ ಎಣಿಕೆಗೆ ಸಿದ್ಧತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT