ಮುಂಬೈ: ಪಾಕ್ ನಟ ಫವಾದ್ ಖಾನ್ ನಟಿಸಿರುವ ‘ಅಬೀರ್ ಗುಲಾಲ್’ ಚಿತ್ರ ಬಿಡುಗಡೆಗೆ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ತೀವ್ರ ವಿರೋಧ ವ್ಯಕ್ತಪಡಿಸಿದೆ.

ಪಾಕಿಸ್ತಾನಿ ನಟರು ನಟಿಸಿದ ಸಿನಿಮಾಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲು ನಮ್ಮ ಪಕ್ಷ ಅವಕಾಶ ನೀಡುವುದಿಲ್ಲ ಎಂದು ಹಲವು ಬಾರಿ ಹೇಳಿದ್ದರೂ, ಕೆಲವು ಕೊಳೆತ ಮಾವಿನ ಹಣ್ಣುಗಳು ಬೆಳೆಯುತ್ತಲೇ ಇವೆ ಎಂದು ಎಂಎನ್ಎಸ್ ನಾಯಕ ಅಮೇಯಾ ಖೋಪ್ಕರ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮಹಾರಾಷ್ಟ್ರದಲ್ಲಿ ಯಾವುದೇ ಕಾರಣಕ್ಕೂ ‘ಅಬೀರ್ ಗುಲಾಲ್’ ಚಿತ್ರ ಬಿಡುಗಡೆಗೆ ನಾವು ಅವಕಾಶ ನೀಡುವುದಿಲ್ಲ. ಎಂಎನ್ಎಸ್ ಕಾರ್ಯಕರ್ತರು ಸಿನಿಮಾ ಪೋಸ್ಟರ್ಗಳನ್ನು ಕಿತ್ತು ಕಸದ ಬುಟ್ಟಿಗೆ ಎಸೆಯುವ ಕೆಲಸ ಮಾಡಬೇಕು ಎಂದು ಖೋಪ್ಕರ್ ಕರೆ ನೀಡಿದ್ದಾರೆ.

ಫವಾದ್ ಖಾನ್ ಮತ್ತು ವಾಣಿ ಕಪೂರ್ ಅಭಿನಯದ ‘ಅಬೀರ್ ಗುಲಾಲ್’ ಚಿತ್ರ ಮೇ 9ರಂದು ಬಿಡುಗಡೆಯಾಗಲಿದೆ.

ಆರತಿ ಎಸ್. ಬಾಗ್ಡಿ ನಿರ್ದೇಶನದ ಈ ಚಿತ್ರವನ್ನು ಇಂಡಿಯನ್ ಸ್ಟೋರೀಸ್, ಎ ರಿಚರ್ ಲೆನ್ಸ್ ಮತ್ತು ಆರ್ಜಯ್ ಪಿಕ್ಚರ್ಸ್ ನಿರ್ಮಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.