ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗ್ರಾ: ಹಿಂದೂ ಯುವತಿ ವರಿಸಿದ ಮುಸ್ಲಿಂ ವ್ಯಕ್ತಿ ಮನೆಗೆ ಬೆಂಕಿ ಹಚ್ಚಿದ ಗುಂಪು

Last Updated 16 ಏಪ್ರಿಲ್ 2022, 13:10 IST
ಅಕ್ಷರ ಗಾತ್ರ

ಲಖನೌ:ಉತ್ತರ ಪ್ರದೇಶದ ಆಗ್ರಾ ಪಟ್ಟಣದಲ್ಲಿ ಹಿಂದೂ ಯುವತಿಯನ್ನು ಮತಾಂತರಗೊಳಿಸಿ ಮದುವೆಯಾಗಿದ್ದಾನೆ ಎಂದು ಆರೋಪಿಸಿ, ಧರಂ ಜಾಗರಣ ಸಮನ್ವಯ ಸಂಘದ ಸದಸ್ಯರ ಗುಂಪೊಂದು ಮುಸ್ಲಿಂ ವ್ಯಕ್ತಿಯೊಬ್ಬನ ಮನೆಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ.

ಈ ಪ್ರದೇಶದಲ್ಲಿ ಜಿಮ್ ಇಟ್ಟುಕೊಂಡಿದ್ದ ಮುಸ್ಲಿಂ ವ್ಯಕ್ತಿಯೊಂದಿಗೆ ಹಿಂದೂ ಹುಡುಗಿಯೊಬ್ಬಳುಕೆಲವು ದಿನಗಳ ಹಿಂದೆ ಓಡಿ ಹೋಗಿದ್ದಳು. ಯುವತಿ ಜತೆ ಪರಾರಿಯಾಗಿದ್ದ ವ್ಯಕ್ತಿಯನ್ನು ಸಾಜಿದ್ ಎಂದು ಗುರುತಿಸಲಾಗಿದ್ದು, ಆತ ನಂತರ ಹಿಂದೂ ಧರ್ಮ ಸ್ವೀಕರಿಸಿ, ದೆಹಲಿಯಲ್ಲಿ ಯುವತಿಯನ್ನು ಮದುವೆಯಾಗಿದ್ದ. ದಂಪತಿ ತಮ್ಮ ಮದುವೆಯ ಚಿತ್ರಗಳು ಮತ್ತು ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.‘ತಾನು ವಯಸ್ಕಳಾಗಿದ್ದು, ಸಾಜಿದ್ಮತಾಂತರವಾಗಿ ಸಹಿಲ್‌ ಎಂದು ಹೆಸರು ಬದಲಿಸಿಕೊಂಡ ನಂತರ ಸ್ವಇಚ್ಚೆಯಿಂದ ಆತನನ್ನು ಮದುವೆಯಾಗಿದ್ದೇನೆ’ ಎಂದು ಹೇಳಿರುವ ಪ್ರತ್ಯೇಕ ವಿಡಿಯೊವೊಂದನ್ನು ಯುವತಿ ಬಿಡುಗಡೆ ಮಾಡಿದ್ದಾಳೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಹಿಂದೂ ಯುವತಿಯನ್ನು ವರಿಸಿರುವುದಕ್ಕೆ ಕ್ರೋಧಗೊಂಡ ಧರಂ ಜಾಗರಣ ಸಮನ್ವಯ ಸಂಘದ ಸದಸ್ಯರು, ಶುಕ್ರವಾರ ಸಾಜಿದ್ ಮತ್ತು ಅವರ ಇಬ್ಬರು ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆಸಿ, ಸಾಮಾನುಗಳನ್ನು ಹೊರಗೆ ಎಸೆದು, ಬೆಂಕಿ ಹಚ್ಚಿದ್ದಾರೆ.

ಬಹುತೇಕ ಕೇಸರಿ ಉಡುಪಿನಲ್ಲಿದ್ದ ವ್ಯಕ್ತಿಗಳ ಗುಂಪು, ‌ರುನಕತಾ ಪ್ರದೇಶದಲ್ಲಿ ಅಂಗಡಿಗಳ ಮೇಲೂ ದಾಳಿ ನಡೆಸಿದೆ. ವ್ಯಾಪಾರ– ವಹಿವಾಟು ಮಳಿಗೆಗಳನ್ನು ಬಲವಂತವಾಗಿ ಮುಚ್ಚಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಯುವತಿಯ ಪೋಷಕರು ನಾಪತ್ತೆ ಪ್ರಕರಣ ದಾಖಲಿಸಿದ ನಂತರ ಪೊಲೀಸರು ದೆಹಲಿಯಲ್ಲಿ ಯುವತಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.ಘಟನೆಗೆ ಸಂಬಂಧಿಸಿ ಎಂಟು ಮಂದಿ ಬಂಧಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT