ಡೆಹ್ರಾಡೂನ್: ಈದ್ ಹಬ್ಬದಂದು ರಾಜ್ಯದ ಬಡ ಮುಸ್ಲಿಮರಿಗೆ ಉಚಿತ ಆಹಾರ ಕಿಟ್ಗಳನ್ನು ವಿತರಿಸಲು ಉತ್ತರಾಖಂಡ ವಕ್ಫ್ ಮಂಡಳಿ ನಿರ್ಧರಿಸಿದೆ ಎಂದು ಮಂಡಳಿಯ ಅಧ್ಯಕ್ಷ ಶಾದಾಬ್ ಶಾಮ್ಸ್ ತಿಳಿಸಿದ್ದಾರೆ.

ಇದಕ್ಕೆ ‘ಮೋದಿ–ಧಾಮಿ’ ಕಿಟ್ ಎಂದು ಹೆಸರಿಡಲಾಗಿದೆ. ಇದು 2 ಲೀಟರ್ ಹಾಲು, 2 ಕೆ.ಜಿ. ಅಕ್ಕಿ, 1 ಕೆ.ಜಿ ಸಕ್ಕರೆ, ಒಂದು ಶಾವಿಗೆ ಪೊಟ್ಟಣ ಮತ್ತು ಒಣ ಹಣ್ಣುಗಳನ್ನು ಒಳಗೊಂಡಿರುತ್ತದೆ ಎಂದು ಅವರು ಹೇಳಿದ್ದಾರೆ.

ಮಂಡಳಿಯ ಮೊದಲ ಆನ್ಲೈನ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಕಿಟ್ಗಳ ಜೊತೆಗೆ ಮಕ್ಕಳಿಗೆ ಉಚಿತ ಬಟ್ಟೆಗಳನ್ನು ಸಹ ಉಡುಗೊರೆಯಾಗಿ ನೀಡಲಾಗುತ್ತದೆ ಎಂದು ಶಮ್ಸ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.