ನವದೆಹಲಿ: ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ದೇಶೀಯ ಹೂಡಿಕೆಯನ್ನು ನಾಶಪಡಿಸುತ್ತಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

ಮತ್ತೊಂದು ರೀತಿಯ ಎಫ್ಡಿಐ(ಭಯ, ವಂಚನೆ ಮತ್ತು ಬೆದರಿಕೆ) ಅಭ್ಯಾಸದ ಮೂಲಕ ವಿದೇಶಿ ದೇಶೀಯ ಹೂಡಿಕೆಯನ್ನು(ಎಫ್ಡಿಐ) ಬಹುತೇಕ ನಾಶ ಮಾಡಿದೆ ಎಂದು ಆರೋಪಿಸಿದೆ.

ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ‘2024-25ರ ಏಪ್ರಿಲ್ನಿಂದ ಜನವರಿ ಅವಧಿಯಲ್ಲಿ ಭಾರತದಲ್ಲಿ ನಿವ್ವಳ ಎಫ್ಡಿಐ ಕೇವಲ 1.4 ಬಿಲಿಯನ್ ಡಾಲರ್ ಆಗಿದೆ. ಆದರೆ, ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರದಲ್ಲಿದ್ದಾಗ 2012-13 ರ ಅವಧಿಯಲ್ಲಿ ಇದು 19 ಬಿಲಿಯನ್ ಡಾಲರ್ ಆಗಿತ್ತು’ ಎಂದು ಟೀಕಿಸಿದ್ಧಾರೆ.

‘ಮೋದಿ ಸರ್ಕಾರ ದೇಶೀಯ ಹೂಡಿಕೆ (ಡಿಐ) ನಾಶಪಡಿಸುವುದರ ಜೊತೆಗೆ ಮತ್ತೊಂದು ರೀತಿಯ ಎಫ್ಡಿಐ (ಭಯ, ವಂಚನೆ ಮತ್ತು ಬೆದರಿಕೆ) ಅಭ್ಯಾಸದ ಮೂಲಕ ಎಫ್ಡಿಐ (ವಿದೇಶಿ ದೇಶೀಯ ಹೂಡಿಕೆ) ಯನ್ನು ಬಹುತೇಕ ನಿರ್ಮೂಲನೆ ಮಾಡಲಾಗಿದೆ’ಎಂದು ರಮೇಶ್ ತಮ್ಮ ಪೋಸ್ಟ್ನಲ್ಲಿ ಹೇಳಿದ್ದಾರೆ.

ಜನವರಿಯಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಅಧಿಕಾರ ವಹಿಸಿಕೊಳ್ಳುವುದಕ್ಕೂ ಮೊದಲೇ ಮೋದಿ ಸರ್ಕಾರ ಈ ಸಾಧನೆ ಮಾಡಿದೆ ಎಂದು ಕುಟುಕಿದ್ದಾರೆ.

‘ಬೈಡನ್ ಅವಧಿಯಲ್ಲಿ, ಚೀನಾ ಹೊರತುಪಡಿಸಿ ಏಷ್ಯಾದ ಇತರೆ ದೇಶಗಳಲ್ಲಿ ಹೂಡಿಕೆ ಮಾಡಲು ಪ್ರಪಂಚದಾದ್ಯಂತದ ಕಂಪನಿಗಳು ಪರದಾಡುತ್ತಿದ್ದವು. ಭಾರತ ಸೊರಗುತ್ತಿದ್ದಾಗ ವಿಯೆಟ್ನಾಂ, ಇಂಡೋನೇಷ್ಯಾ ಮತ್ತು ಬಾಂಗ್ಲಾದೇಶ ಶತಕೋಟಿ ಹೂಡಿಕೆಗಳನ್ನು ಪಡೆದವು’ಎಂದು ಕಾಂಗ್ರೆಸ್ ಮುಖಂಡ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.