ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರದರ್ಶಕತೆ ಮತ್ತು ಪರಿಶ್ರಮ ಗೆಲುವು ಸಾಧಿಸಿದೆ: ನರೇಂದ್ರ ಮೋದಿ

Last Updated 27 ಮೇ 2019, 11:58 IST
ಅಕ್ಷರ ಗಾತ್ರ

ವಾರಾಣಸಿ: ಕಾಶಿ ವಿಶ್ವನಾಥ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ್ದಾರೆ. ಲೋಕಸಭಾ ಚುನಾವಣೆ ಮುಗಿದ ನಂತರ ಮೊದಲ ಬಾರಿ ತಮ್ಮ ಲೋಕಸಭಾ ಕ್ಷೇತ್ರಕ್ಕೆ ಆಗಮಿಸಿದ ಮೋದಿ, ಮತದಾರರಿಗೆ ಧನ್ಯವಾದ ಸಲ್ಲಿಸಿದ್ದಾರೆ.ಅಮಿತ್ ಶಾ ಮತ್ತು ಯೋಗಿ ಆದಿತ್ಯನಾಥರು ನಿರಂತರವಾಗಿ ಚುನಾವಣಾ ಪ್ರಚಾರ ನಡೆಸಿದ್ದರಿಂದ ಪಕ್ಷ 300ಕ್ಕಿಂತ ಹೆಚ್ಚು ಸೀಟುಗಳನ್ನು ಗೆಲ್ಲುವುದಕ್ಕೆ ಸಾಧ್ಯವಾಯಿತು. ಒಬ್ಬ ಬಿಜೆಪಿ ಕಾರ್ಯಕರ್ತನಾಗಿ ತಾನು ಎಲ್ಲ ಜವಾಬ್ದಾರಿಗಳನ್ನು ನಿರ್ವಹಿಸಲು ಯತ್ನಿಸುತ್ತೇನೆ ಎಂದಿದ್ದಾರೆ ಮೋದಿ.

ಮೋದಿ ಭಾಷಣದ ಮುಖ್ಯಾಂಶಗಳು

ಲೋಕಸಭಾ ಚುನಾವಣೆಯ ವೇಳೆ ಕಾಶಿಯಲ್ಲಿ ಚುನಾವಣೆಯ ಕಾವು ಏರಿತ್ತು. ಪಕ್ಷದ ಕಾರ್ಯಕರ್ತರಿಗೆ ತೃಪ್ತಿ ಆಗಬೇಕು ಅದಕ್ಕಾಗಿ ನಾನು ಬದುಕುತ್ತೇನೆ ಎಂದಿದ್ದಾರೆ. ಕಾಶಿಯ ಜನರ ನಂಬಿಕೆ ಮತ್ತು ಪರಿಶ್ರಮದಿಂದ ನಾನು ಗೆದ್ದಿದ್ದೇನೆ. ಹಾಗಾಗಿ ನಾನು ಕೇದಾರನಾಥಕ್ಕೆ ಹೋದೆ.ಕಾಶಿಯನ್ನು ಪ್ರತಿನಿಧೀಕರಿಸುವುದೇ ಗೌರವದ ವಿಷಯ.

ಎಲ್ಲರೂ ನರೇಂದ್ರ ಮೋದಿ ಆಗಿದ್ದರು
ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಲ್ಲ ಅಭ್ಯರ್ಥಿಗಳಿಗೂ ಧನ್ಯವಾದ ಹೇಳಿದಮೋದಿ, ಸುಗಮವಾಗಿ ಚುನಾವಣೆ ನಡಸಲು ಹಾಗೂ ಮಾಧ್ಯಮಗಳನ್ನು ನಿಯಂತ್ರಿಸಿದ ಜಿಲ್ಲಾಡಳಿತಕ್ಕೆ ಧನ್ಯವಾದಗಳು ಎಂದಿದ್ದಾರೆ.ಪ್ರತಿ ಮನೆ, ಗಲ್ಲಿಗಳಲ್ಲಿಯೂ ನರೇಂದ್ರ ಮೋದಿ ಇದ್ದರು. ಮತಪತ್ರದಲ್ಲಿ ಮಾತ್ರ ಇದ್ದದ್ದು ಒಂದೇ ಮೋದಿ.

ಪ್ರಜಾಪ್ರಭುತ್ವದ ಹಬ್ಬದಲ್ಲಿ ಗೆಲವು ಸಾಧಿಸಿದವರನ್ನು ಅಥವಾ ಸೋತವರ ಅಂತರವನ್ನು ಹೋಲಿಸದೇ ಇರುವುದಕ್ಕೆ ನಾನು ಕಾರ್ಯಕರ್ತರಿಗೆ ಧನ್ಯವಾದ ಹೇಳುತ್ತೇನೆ. ನಾನು ಕಾಶಿಯಲ್ಲಿದ್ದರೂ ಇಡೀ ಉತ್ತರ ಪ್ರದೇಶ ದೇಶಕ್ಕೆ ಹೊಸ ದಿಶೆಯನ್ನು ತೋರಿಸಿ ಪ್ರಜಾಪ್ರಭುತ್ವ ಮತ್ತಷ್ಟು ಗಟ್ಟಿಯಾಗುವಂತೆ ಮಾಡಿತು .

ಪಾರದರ್ಶಕತೆ ಮತ್ತು ಪರಿಶ್ರಮ ನಕಾರಾತ್ಮಕ ಧೋರಣೆ ವಿರುದ್ಧ ಗೆಲುವು ಸಾಧಿಸಿತು
2014, 2017 ಮತ್ತು 2019ರಲ್ಲಿ ಉತ್ತರ ಪ್ರದೇಶ ಹ್ಯಾಟ್ರಿಕ್ ಗೆಲುವು ಸಾಧಿಸಿತು.ಈ ಎಲ್ಲ ಗೆಲುವುಗಳು ವಿಶೇಷವಾಗಿದ್ದು ರಾಜಕೀಯ ವಿಶ್ಲೇಷಕರು ಇದರ ಬಗೆ ಕೂಲಂಕಷವಾಗಿ ಅಧ್ಯಯನ ಮಾಡಬೇಕಿದೆ.ಉತ್ತರ ಪ್ರದೇಶದ ದೇಶದ ಪ್ರಜಾಪ್ರಭುತ್ವವನ್ನು ಮತ್ತಷ್ಟು ದೃಢಗೊಳಿಸಿದೆ. ರಾಜಕೀಯ ಎಂಬುದು ಧೋರಣೆಗೆ ಸಂಬಂಧಿಸಿದ್ದಾಗಿರುತ್ತದೆ.ಆದರೆ ಎಲ್ಲದಕ್ಕಿಂತಲೂ ಮಿಗಿಲಾಗಿ ಪಾರದರ್ಶಕತೆ ಮತ್ತು ಪರಿಶ್ರಮ ಗೆಲ್ಲುತ್ತದೆ ಎಂಬುದನ್ನು ಪಂಡಿತರು ಅರ್ಥ ಮಾಡಿಕೊಳ್ಳಬೇಕು.ಪಾರದರ್ಶಕತೆ ಮತ್ತು ಪರಿಶ್ರಮಕ್ಕೆ ಬೇರೆ ಪರ್ಯಾಯಗಳು ಇಲ್ಲ ಎಂಬುದನ್ನು ಭಾರತ ಪಂಡಿತರಿಗೆ ತೋರಿಸಿಕೊಟ್ಟಿದೆ.ಈ ಚುನಾವಣೆಯಲ್ಲಿ ಕೆಮಿಸ್ಟ್ರಿ ಅಂಕಗಣಿತವನ್ನು ಪರಾಭವಗೊಳಿಸಿದೆ.

ಬಿಜೆಪಿ ಕಾರ್ಯಕರ್ತರ ಹತ್ಯೆಗೆ ಖಂಡನೆ
ಪಶ್ಚಿಮ ಬಂಗಾಳ, ತ್ರಿಪುರಾ ಮತ್ತು ಕೇರಳದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ. ಈ ರಾಜ್ಯಗಳಿದೆ ಕೇಂದ್ರ ಸರ್ಕಾರ ಸಹಾಯ ಮಾಡುವುದಿಲ್ಲ ಎಂಬ ನಂಬಿಕೆಯನ್ನು ಇಲ್ಲಿ ಹುಟ್ಟು ಹಾಕಲಾಗಿದೆ.ಬಿಜೆಪಿಯಲ್ಲಿರುವ ನಾವು ಎರಡು ರೀತಿಯ ಸವಾಲುಗಳನ್ನೆದುರಿಸುತ್ತೇವೆ: ರಾಜಕೀಯ ಹಿಂಸಾಚಾರ ಮತ್ತು ರಾಜಕೀಯ ಅಸ್ಪೃಶ್ಯತೆ.

* ಕಾಶ್ಮೀರ, ಕೇರಳ ಅಥವಾ ಬಂಗಾಳದಲ್ಲಿ ಯಾಕೆ ನಮ್ಮ ಕಾರ್ಯಕರ್ತರು ಹತ್ಯೆಯಾಗುತ್ತಿದ್ದಾರೆ? ಇದು ನಾಚಿಕೆಗೇಡು ಮತ್ತು ಪ್ರಜಾಪ್ರಭುತ್ವ ವಿರೋಧಿ.

*ಕಾರ್ಯ ಮತ್ತು ಕಾರ್ಯಕರ್ತರು ಅದ್ಭುತಗಳನ್ನು ಸೃಷ್ಟಿಸುತ್ತಾರೆ. ನಾವು ಭಾರತದಾದ್ಯಂತ ಅಧಿಕಾರ ನಡೆಸುತ್ತಿದ್ದೇವೆ ಆದರೆ ರಾಜಕೀಯ ಪಂಡಿತರು ನಮ್ಮನ್ನು ಹಿಂದೀ ಭಾಷಿಗರ ಪಕ್ಷ ಅಂತಾರೆ. ಬಿಜೆಪಿ ಈಶಾನ್ಯ ರಾಜ್ಯಗಳಲ್ಲಿ ಇದ್ದರೂ ಪಂಡಿತರು ನಮ್ಮನ್ನು ಹಿಂದಿ ಭಾಷಿಕ ಪಕ್ಷ ಅಂತಾರೆ.

*ಚುನಾವಣೆ ಗೆದ್ದು ಅಧಿಕಾರಕ್ಕೆ ಬಂದ ನಂತರ ಭರವಸೆಗಳನ್ನು ನೆರವೇರಿಸಲು ಕಾರ್ಯ ಪ್ರವೃತ್ತರಾಗಬೇಕು. ಸರ್ಕಾರ ಸೌಲಭ್ಯಗಳುಜನರಿಗೆ ಸೇರಿದ್ದು ಎಂಬುದನ್ನು ನಾವು ದೇಶದ ಜನರಿಗೆ ಮನವರಿಕೆ ಮಾಡಿಕೊಡಬೇಕು.

ಭಾರತ ಮಾತೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು
ನಾವು ಭಾರತ್ ಮಾತಾ ಕೀ ಎಂದು ಕೂಗಿ ತೆರೆದ ಜಾಗದಲ್ಲಿಯೇ ಉಗುಳುತ್ತೇವೆ, ಇದನ್ನು ಬದಲಿಸಬೇಕು, ಭಾರತ್ ಮಾತಾ ಕೀ ಜೈ ಎಂದು ಕೂಗುವುದರ ಜತೆಗೇ ಪರಿಸರವನ್ನು ಶುಚಿಯಾಗಿರಿಸಬೇಕು. ನನ್ನನ್ನು ಆಯ್ಕೆ ಮಾಡಿದ್ದಕ್ಕೆ ನಿಮಗೆ ಧನ್ಯವಾದಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT