‘ಬಿಜೆಪಿ ಬಂದರೆ ಸಂವಿಧಾನ ಬದಲಿಸುತ್ತದೆ’
ಬಿಜೆಪಿಯ ಹಿರಿಯ ನಾಯಕರು ಈಗ ತೋರಿಕೆಗೆ ನಿರಾಕರಿಸುತ್ತಿದ್ದರೂ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸುತ್ತಾರೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಶನಿವಾರ ಆರೋಪಿಸಿದರು. ಗುಜರಾತ್‌ನ ವಲ್ಸಾಡ್ ಜಿಲ್ಲೆಯ ಆದಿವಾಸಿ ಪ್ರಾಬಲ್ಯದ ಧರ್ಮಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನಂತ್ ಪಟೇಲ್ ಪರ ಸಾರ್ವಜನಿಕ ಸಭೆ ನಡೆಸಿದ ಅವರು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಹಣದುಬ್ಬರ ಏರಿಕೆಯನ್ನು ಪ್ರಸ್ತಾಪಿಸಿದ ಅವರು ‘ಪ್ರಧಾನಿ ಮೋದಿ ಅವರು ವೇದಿಕೆಗಳನ್ನು ‘ಸೂಪರ್ ಮ್ಯಾನ್’ ರೀತಿ ಪ್ರವೇಶಿಸುತ್ತಾರೆ. ಅವರನ್ನು (ಮೋದಿ) ‘ದುಬಾರಿ ಮನುಷ್ಯ’ ಎಂದೇ ನೆನಪಿಟ್ಟುಕೊಳ್ಳಿ’ ಎಂದು ಜನರಿಗೆ ಹೇಳಿದರು. ‘ಪ್ರಧಾನಿ ಮೋದಿ ಎಂದೂ ಶಿಕ್ಷಣ ಆರೋಗ್ಯ ಹಣದುಬ್ಬರದ ಬಗ್ಗೆ ಮಾತನಾಡುವುದಿಲ್ಲ. ಇದನ್ನು ಜನ ಮತ್ತೆ ಐದು ವರ್ಷ ಸಹಿಸಿಕೊಳ್ಳುತ್ತಾರೆ ಎಂದು ನನಗೆ ಅನ್ನಿಸುವುದಿಲ್ಲ. ಅವರು ಕೇವಲ ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ ಜಗತ್ತು ಸುತ್ತುತ್ತಾರೆ. ಈಗ ಜನ ಸಾಧನೆಯ ಪಟ್ಟಿ ಕೇಳುತ್ತಿರುವುದರಿಂದ ಆತಂಕಗೊಂಡಿದ್ದಾರೆ. ಹಾಗಾಗಿಯೇ ಅವರು ಹಿಂದೂ ಮುಸ್ಲಿಂ ವಿಚಾರ ಪ್ರಸ್ತಾಪಿಸುತ್ತಿದ್ದಾರೆ’ ಎಂದು ಹೇಳಿದರು. ಬಿಜೆಪಿಯ ಹಿರಿಯ ನಾಯಕರು ಈಗ ತೋರಿಕೆಗೆ ನಿರಾಕರಿಸುತ್ತಿದ್ದರೂ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸುತ್ತಾರೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಶನಿವಾರ ಆರೋಪಿಸಿದರು. ಗುಜರಾತ್‌ನ ವಲ್ಸಾಡ್ ಜಿಲ್ಲೆಯ ಆದಿವಾಸಿ ಪ್ರಾಬಲ್ಯದ ಧರ್ಮಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನಂತ್ ಪಟೇಲ್ ಪರ ಸಾರ್ವಜನಿಕ ಸಭೆ ನಡೆಸಿದ ಅವರು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಹಣದುಬ್ಬರ ಏರಿಕೆಯನ್ನು ಪ್ರಸ್ತಾಪಿಸಿದ ಅವರು ‘ಪ್ರಧಾನಿ ಮೋದಿ ಅವರು ವೇದಿಕೆಗಳನ್ನು ‘ಸೂಪರ್ ಮ್ಯಾನ್’ ರೀತಿ ಪ್ರವೇಶಿಸುತ್ತಾರೆ. ಅವರನ್ನು (ಮೋದಿ) ‘ದುಬಾರಿ ಮನುಷ್ಯ’ ಎಂದೇ ನೆನಪಿಟ್ಟುಕೊಳ್ಳಿ’ ಎಂದು ಜನರಿಗೆ ಹೇಳಿದರು. ‘ಪ್ರಧಾನಿ ಮೋದಿ ಎಂದೂ ಶಿಕ್ಷಣ ಆರೋಗ್ಯ ಹಣದುಬ್ಬರದ ಬಗ್ಗೆ ಮಾತನಾಡುವುದಿಲ್ಲ. ಇದನ್ನು ಜನ ಮತ್ತೆ ಐದು ವರ್ಷ ಸಹಿಸಿಕೊಳ್ಳುತ್ತಾರೆ ಎಂದು ನನಗೆ ಅನ್ನಿಸುವುದಿಲ್ಲ. ಅವರು ಕೇವಲ ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ ಜಗತ್ತು ಸುತ್ತುತ್ತಾರೆ. ಈಗ ಜನ ಸಾಧನೆಯ ಪಟ್ಟಿ ಕೇಳುತ್ತಿರುವುದರಿಂದ ಆತಂಕಗೊಂಡಿದ್ದಾರೆ. ಹಾಗಾಗಿಯೇ ಅವರು ಹಿಂದೂ ಮುಸ್ಲಿಂ ವಿಚಾರ ಪ್ರಸ್ತಾಪಿಸುತ್ತಿದ್ದಾರೆ’ ಎಂದು ಹೇಳಿದರು.