ಭೋಪಾಲ್: ಮೋಹನ್ ಯಾದವ್ ನೇತೃತ್ವದ ಮಧ್ಯಪ್ರದೇಶದ ಬಿಜೆಪಿ ಸರ್ಕಾರ ಹೊಸ ಅಬಕಾರಿ ನೀತಿಯನ್ನು ಬಿಡುಗಡೆ ಮಾಡಿದೆ.

ಹೊಸ ಅಬಕಾರಿ ನೀತಿ ಪ್ರಕಾರ ಮಧ್ಯಪ್ರದೇಶದಲ್ಲಿ ಇನ್ಮುಂದೆ ಕಡಿಮೆ ಕಿಕ್ ಕೊಡುವ (ಅಲ್ಪಪ್ರಮಾಣದ ಆಲ್ಕೋಹಾಲ್ ಹೊಂದಿರುವ ಮದ್ಯಗಳು) ಮದ್ಯಗಳನ್ನು, ಪಾನೀಯಗಳನ್ನು ಮಾರುವ ಹೊಸ ಬಾರ್ಗಳು ಅಸ್ತಿತ್ವಕ್ಕೆ ಬರಲಿವೆ ಎಂದು ಸಿಎಂ ಹೇಳಿದ್ದಾರೆ.

ಈ ಹೊಸ ಬಾರ್ಗಳಲ್ಲಿ ಬಿಯರ್, ವೈನ್ ಮತ್ತು ಶೇ. 10 ಕ್ಕಿಂತ ಕಡಿಮೆ ಆಲ್ಕೋಹಾಲ್ ಹೊಂದಿರುವ ಮದ್ಯಗಳನ್ನು ಮಾರಾಟ ಮಾಡಲು ಮಾತ್ರ ಅನುಮತಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಈಗಾಗಲೇ ಮಧ್ಯಪ್ರದೇಶದಲ್ಲಿ 470 ಲಿಕ್ಕರ್/ಬಿಯರ್ ಬಾರ್ಗಳು ಅಸ್ತಿತ್ವದಲ್ಲಿವೆ. ಹೊಸ ನೀತಿಯ ಪ್ರಕಾರ ಬಾರ್ಗಳ ಸಂಖ್ಯೆ ಹೆಚ್ಚಾಗಲಿದ್ದು, ಇದರಿಂದ ಬಜೆಟ್ನಲ್ಲಿ ಅಬಕಾರಿ ಇಲಾಖೆಯಿಂದ ಹೆಚ್ಚು ಹಣ ಸಂಗ್ರಹಿಸುವ ಗುರಿಯನ್ನು ಸರ್ಕಾರ ಹೊಂದಿದೆ.

ಒಟ್ಟಾರೆ ಮಧ್ಯಪ್ರದೇಶದಲ್ಲಿ 3600 ಮದ್ಯ ಮಾರಾಟ ಮಳಿಗೆಗಳು ಹಾಗೂ ಬಾರ್ಗಳು ಇವೆ. ಇದರಿಂದ ಸರ್ಕಾರಕ್ಕೆ ವಾರ್ಷಿಕವಾಗಿ ₹15,200 ಕೋಟಿ ಆದಾಯ ಬರುತ್ತದೆ.

ಯಾತ್ರಾ ಸ್ಥಳಗಳಲ್ಲಿ ಮದ್ಯ ನಿಷೇಧ

ಹೊಸ ಅಬಕಾರಿ ನೀತಿಯಲ್ಲಿ ಮಧ್ಯಪ್ರದೇಶದ ಉಜ್ಜಯಿನಿ, ಓಂಕಾರೇಶ್ವರ, ಮಹೇಶ್ವರ, ಮಂಡ್ಲೇಶ್ವರ, ಊರ್ಚಾ, ಮೈಹಾರ್, ಚಿತ್ರಕೂಟ, ದಾತಿಯಾ, ಅಮರಕಂಟಕ್ ಮತ್ತು ಸಲ್ಕಾನಪುರ ಸೇರಿದಂತೆ 19 ಯಾತ್ರಾಸ್ಥಳಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.

ಈ ಯಾತ್ರಾ ಸ್ಥಳಗಳಲ್ಲಿ ಮದ್ಯ ಮಾರಾಟಕ್ಕೆ, ಬಾರ್ಗಳಿಗೆ ಸಂಪೂರ್ಣ ನಿಷೇಧ ಇರುತ್ತದೆ. ಆದರೆ, ವೈಯಕ್ತಿಕವಾಗಿ ಮದ್ಯ ಸೇವಿಸುವವರಿಗೆ ಯಾವುದೇ ದಂಡ ಅಥವಾ ಶಿಕ್ಷೆ ವಿಧಿಸುವುದಿಲ್ಲ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
.ಭಾರತದ ಬಿಯರ್ ಉದ್ಯಮದಿಂದ ಜಿಡಿಪಿಗೆ ₹93,234 ಕೋಟಿ ಕೊಡುಗೆ: ಬಿಎಐ.‘ಬಿಯರ್’ ಕುಡಿಯುವಂತೆ ಶಿಕ್ಷಕನ ಒತ್ತಾಯ: ರೈಲಿಗೆ ತಲೆಕೊಟ್ಟ ವಿದ್ಯಾರ್ಥಿ!.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.