ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ: ಜಿ–20 ಸಭೆ – ಡ್ರೋನ್‌ಗಳ ಹಾರಾಟ ನಿಷೇಧ

Published 16 ಮೇ 2023, 16:01 IST
Last Updated 16 ಮೇ 2023, 16:01 IST
ಅಕ್ಷರ ಗಾತ್ರ

ಮುಂಬೈ: ನಗರದಲ್ಲಿ ನಡೆಯುತ್ತಿರುವ ಜಿ–20 ಸಭೆಯನ್ನು ಗಮನದಲ್ಲಿಟ್ಟುಕೊಂಡು ಮುಂಬೈ ಪೊಲೀಸರು ಡ್ರೋನ್‌ ಅಥವಾ ಬಲೂನ್‌ಗಳನ್ನು ಹಾರಿಸುವುದನ್ನು ನಿಷೇಧಿಸಿದ್ದಾರೆ.

ಪ್ಯಾರಾ-ಗ್ಲೈಡರ್‌ಗಳು, ಎಲ್ಲಾ ರೀತಿಯ ಬಲೂನ್‌ಗಳು, ಗಾಳಿಪಟಗಳು ಮತ್ತು ರಿಮೋಟ್ ಕಂಟ್ರೋಲ್ ಮೈಕ್ರೋಲೈಟ್ ಏರ್‌ಕ್ರಾಫ್ಟ್‌ಗಳ ಹಾರಾಟವನ್ನು ನಿಷೇಧಿಸಲಾಗಿದೆ ಎಂದು ಸೋಮವಾರ ಉಪ ಪೊಲೀಸ್ ಆಯುಕ್ತರು (ಕಾರ್ಯಾಚರಣೆ) ಸೆಕ್ಷನ್ 144 ರ ಅಡಿಯಲ್ಲಿ ಆದೇಶ ಹೊರಡಿಸಿದ್ದಾರೆ. ಇದು ಮೇ 16 ರಿಂದ 25 ರವರೆಗೆ ಜಾರಿಯಲ್ಲಿರುತ್ತದೆ.

ಜಿ 20 ಯ ಶಕ್ತಿ ಪರಿವರ್ತನಾ ಕಾರ್ಯ ಗುಂಪಿನ ಮೂರನೇ ಸಭೆ ಸೋಮವಾರ ಇಲ್ಲಿ ಪ್ರಾರಂಭವಾಗಿದ್ದು, ಜಿ 20 ಸಭೆಯಲ್ಲಿ ಹೆಚ್ಚಿನ ಸಂಖ್ಯೆಯ ವಿಐಪಿಗಳು ಭಾಗವಹಿಸುವ ನಿರೀಕ್ಷೆಯಿರುವುದರಿಂದ ಡ್ರೋನ್‌ಗಳು ಮತ್ತು ಅಂತಹುದೇ ಉಪಕರಣಗಳನ್ನು ಬಳಸಿ ಭಯೋತ್ಪಾದಕರು ಅಥವಾ ಸಮಾಜ ವಿರೋಧಿಗಳು ದಾಳಿ ನಡೆಸುವ ಸಾಧ್ಯತೆ ಇದೆಯೆಂದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

‘ಸಭೆಯಲ್ಲಿ ಪಾಲ್ಗೊಳ್ಳುವ ಜನರ ಸುರಕ್ಷತೆ ಮತ್ತು ಭದ್ರತೆಯನ್ನು ಪರಿಗಣಿಸಿ, ಮುಂಬೈ ಪೊಲೀಸರು ಸಹರ್, ವಕೋಲಾ, ಬಿಕೆಸಿ, ಬಾಂದ್ರಾ, ಕೊಲಾಬಾ ಮತ್ತು ಆಜಾದ್ ಮೈದಾನ್ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಡ್ರೋನ್‌ಗಳ ಹಾರಾಟವನ್ನು ನಿಷೇಧಿಸಿದ್ದಾರೆ’ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT