ಮುಂಬೈ: ಮುಂಬೈ ಮೆಟ್ರೊನ ಆಕ್ವಾ ಲೈನ್ ಮಾರ್ಗದಲ್ಲಿನ ನಿಲ್ದಾಣಗಳ ಹೆಸರುಗಳನ್ನು ಬದಲಿಸುವ ಮೂಲಕ ಮಹಾನ್ ನಾಯಕರಿಗೆ ಬಿಜೆಪಿ ಸರ್ಕಾರ ಅವಮಾನ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಸಿದ್ಧಿವಿನಾಯಕ ಮೆಟ್ರೊ ನಿಲ್ದಾಣದ ಎದುರು ಕಾಂಗ್ರೆಸ್ ಕಾರ್ಯಕರ್ತರು ಭಿತ್ತಪತ್ರ ಹಿಡಿದು ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ನ ಮುಂಬೈ ಘಟಕದ ಅಧ್ಯಕ್ಷೆ ವರ್ಷಾ ಗಾಯಕ್ವಾಡ್, ‘ನೆಹರು ಸೈನ್ಸ್ ಸೆಂಟರ್ ನಿಲ್ದಾಣ ಹೆಸರನ್ನು ‘ಸೈನ್ಸ್ ಸೆಂಟರ್’ ಎಂದಷ್ಟೇ ಇಡಲಾಗಿದೆ. ಆ ಮೂಲಕ ದೇಶದ ಮೊದಲ ಪ್ರಧಾನಿಗೆ ಅವಮಾನ ಮಾಡಲಾಗಿದೆ’ ಎಂದು ಆರೋಪಿಸಿದ್ದಾರೆ.

‘ಸಿದ್ಧಿವಿನಾಯಕ, ಮಹಾಲಕ್ಷ್ಮಿ, ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್ ಹಾಗೂ ಆಚಾರ್ಯ ಅತ್ರೆ ಚೌಕ್ ಹೆಸರಿನ ಹಿಂದೆ ಖಾಸಗಿ ಕಂಪನಿಗಳ ಹೆಸರುಗಳನ್ನು ಸೇರಿಸಲಾಗಿದೆ. ಇದು ಸಾರ್ವಜನಿಕರ ಭಾವನೆಗಳಿಗೆ ಧಕ್ಕೆ ತಂದಿದೆ. ಬಿಜೆಪಿ ಸರ್ಕಾರದ ನಡೆ ಮಹಾರಾಷ್ಟ್ರ ವಿರೋಧಿ ಮನಸ್ಥಿತಿಯದ್ದಾಗಿದೆ. ಗಣ್ಯ ವ್ಯಕ್ತಿಗಳ ಕುರಿತು ಅಗೌರವ ತೋರುವ ನಡೆಯಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.