ಮುಂಬೈ: ‘15 ವರ್ಷದ ಬಾಲಕಿ ಮೇಲೆ ಕಳೆದ ಮೂರು ತಿಂಗಳಲ್ಲಿ ಐದು ಮಂದಿ ಹಲವು ಸಲ ಅತ್ಯಾಚಾರವೆಸಗಿದ ಪ್ರಕರಣ ಮಧ್ಯ ಮುಂಬೈನಲ್ಲಿ ನಡೆದಿದೆ’ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಕಾಲಾಚೌಕಿ ಪ್ರದೇಶದಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ 25 ವರ್ಷದ ವ್ಯಕ್ತಿ ಹಾಗೂ ಕಾನೂನು ಸಂಘರ್ಷಕ್ಕೊಳಗಾದ ನಾಲ್ವರನ್ನು ಭಾನುವಾರ ಬಂಧಿಸಲಾಗಿದೆ.

‘ಆರೋಪಿಗಳಲ್ಲಿ ಒಬ್ಬನ ಗೆಳತಿಯು ಸಂತ್ರಸ್ತೆಯ ಮನೆಗೆ ಬಂದು, ತನ್ನ ಗೆಳೆಯನ ಜೊತೆ ಸಂಬಂಧ ಹೊಂದಿರುವ ಕುರಿತು ಪ್ರಶ್ನಿಸಿದ್ದಳು. ಈ ವೇಳೆ ಆಕೆಯ ಮೊಬೈಲ್ ಫೋನ್ ಪಡೆದು ಹೆತ್ತವರು ಕೂಲಂಕಷವಾಗಿ ಪರಿಶೀಲಿಸಿದರು. ಆಗ ಆರೋಪಿಯ ಜೊತೆಗೆ ದೈಹಿಕ ಸಂಬಂಧ ಹೊಂದಿದ್ದ ಕುರಿತು ಮೊಬೈಲ್ ಸಂದೇಶಗಳು ಹಾಗೂ ವಿಡಿಯೊಗಳು ಸಿಕ್ಕವು. ಕೂಡಲೇ ಬಾಲಕಿಯ ಪೋಷಕರು ಪೊಲೀಸರನ್ನು ಸಂಪರ್ಕಿಸಿ, ದೂರು ನೀಡಿದರು’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೂರು ಆಧರಿಸಿ ಐದು ಮಂದಿಯ ವಿರುದ್ಧ ಬಿಎನ್ಎಸ್ನ ಅಡಿಯಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ, ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.