ತಿರುವನಂತಪುರ: ಕೆಲವು ವಿಷಯಗಳ ಬಗ್ಗೆ ನನ್ನ ನಿಲುವು ದೇಶದ ಪರ ಹೊರತು ಬಿಜೆಪಿ ಪರವಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ.

ಆದರೆ ನಾನು ದೇಶದ ಪರ ಅಥವಾ ಸರ್ಕಾರದ ಪರ ಮಾತನಾಡಿದರೆ ಅದನ್ನು ಬಿಜೆಪಿ ಪರ ಎಂದು ಬಿಂಬಿಸುತ್ತಾರೆ. ಆದರೆ ವಾಸ್ತವಾಗಿ ನಾನು ದೇಶದ ಪರ ಧ್ವನಿಗೂಡಿಸುತ್ತೇನೆ ಎಂದು ಶಶಿ ತರೂರ್ ಸ್ಪಷ್ಟನೆ ನೀಡಿದ್ದಾರೆ.

ಕೆಲವು ಅಂತರರಾಷ್ಟ್ರೀಯ ವಿಷಯಗಳ ಬಗ್ಗೆ ಚರ್ಚಿಸಲು ನನಗೆ ಇಷ್ಟವಾಗುವುದಿಲ್ಲ. ಹೀಗಾಗಿ ನಾನು ದೇಶದಲ್ಲಿ ನಡೆಯುವ ವಿಚಾರಗಳ ಬಗ್ಗೆ ಮಾತನಾಡುತ್ತೇನೆ ಎಂದಿದ್ದಾರೆ.
.ಬೆಂಗಳೂರಿನ ಮಾರತಹಳ್ಳಿಯನ್ನು ಮಿನಿ ಆಂಧ್ರ ಎಂದ ತೆಲುಗು ಪಿಲ್ಲಾ.. ಕನ್ನಡಿಗರು ಕೆಂಡ.ಹಂಪಿ: ರಾಷ್ಟ್ರೀಯ ಯೋಜನೆಯಾಗಿ ಘೋಷಣೆ?–ಕೇಂದ್ರ ಬಜೆಟ್ ಮೇಲೆ ನಿರೀಕ್ಷೆ.
ಕಾಂಗ್ರೆಸ್ ಪಕ್ಷವನ್ನು ತೊರೆಯುತ್ತೀರಾ ಎಂದು ಪ್ರಶ್ನೆಗೆ ಉತ್ತರಿಸಿದ ತರೂರ್, 'ನಾನು ಕಾಂಗ್ರೆಸ್ನಲ್ಲಿಯೇ ಇರುತ್ತೇನೆ. ನಾನು ಎಲ್ಲಿಗೂ ಹೋಗುವುದಿಲ್ಲ. ಕೇರಳದ ಚುನಾವಣಾ ಪ್ರಚಾರದ ಭಾಗವಾಗಿರುತ್ತೇನೆ. ಯುಡಿಎಫ್ನ ಗೆಲುವಿಗಾಗಿ ಕೆಲಸ ಶ್ರಮಿಸುತ್ತೇನೆ ಎಂದು ಹೇಳಿದ್ದಾರೆ.

'ನಾನು ಯಾವಾಗಲೂ ಸಂಸತ್ತಿನಲ್ಲಿ ಪಕ್ಷದ ಪರವಾಗಿ ನಿಂತಿದ್ದೇನೆ. ಹೀಗಾಗಿ ಚಿಂತಿಸುವ ಅಗತ್ಯವಿಲ್ಲ' ಎಂದೂ ಅವರು ತಿಳಿಸಿದ್ದಾರೆ.

ಕಳೆದ ವರ್ಷ ಭಾರತ-ಪಾಕಿಸ್ತಾನ ಸಂಘರ್ಷ ಮತ್ತು ಪಹಲ್ಗಾಮ್ ದಾಳಿಯ ಬಳಿಕ ತರೂರ್ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿದ್ದವು. ಅವರ ಹೇಳಿಕೆಗಳು ಕಾಂಗ್ರೆಸ್ ನಿಲುವಿಗೆ ವಿರುದ್ಧವಾಗಿದ್ದವು. ಸ್ವಪಕ್ಷದವರೇ ಅವರ ನೀಡಿದ್ದ ಹೇಳಿಕೆಗಳನ್ನು ಪ್ರಶ್ನಿಸಿ, ಟೀಕಿಸಿದ್ದರು.
.ಅಮೃತ ಅಂಜನ್ ಸಿನಿಮಾ ತಂಡಕ್ಕೆ ರಾಕಿಂಗ್ ಸ್ಟಾರ್ ಶುಭ ಹಾರೈಕೆ: ಯಶ್ ಹೇಳಿದ್ದೇನು? .ಮಹಾತ್ಮ ಗಾಂಧಿ ಪುಣ್ಯತಿಥಿ: ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ ಸೇರಿ ಗಣ್ಯರ ನಮನ.Menopause: ಋತು‘ಬಂಧ’ನದಲ್ಲಿ ಕುಗ್ಗದಿರಲಿ ಮನ.ಪ್ರಶ್ನೋತ್ತರ: ಟಿಡಿಎಸ್ ಮಾಹಿತಿಯನ್ನು ಬಾಡಿಗೆದಾರರಿಂದ ಹೇಗೆ ಪಡೆದುಕೊಳ್ಳಬಹುದು?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.