ನವದೆಹಲಿ: ದೇಶ ವಿರೋಧಿ ಮತ್ತು ಪ್ರತ್ಯೇಕತಾವಾದ ಚಟುವಟಿಕೆಗಳಲ್ಲಿ ತೊಡಗಿರುವ ಹಾಗೂ ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಮುಸ್ಲಿಂ ಲೀಗ್ ಜಮ್ಮು–ಕಾಶ್ಮೀರ (ಮಸರತ್ ಆಲಂ ಬಣ) ಸಂಘಟನೆ ಮೇಲೆ ಕೇಂದ್ರ ಸರ್ಕಾರ ಬುಧವಾರ ನಿಷೇಧ ಹೇರಿದೆ.

ಸಂಘಟನೆಯನ್ನು ನಿಷೇಧಿಸುವ ನಿರ್ಧಾರ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ‘ರಾಷ್ಟ್ರದ ಏಕತೆ, ಸಾರ್ವಭೌಮತೆ ಮತ್ತು ಸಮಗ್ರತೆಗೆ ವಿರುದ್ಧವಾಗಿ ಕೆಲಸ ಮಾಡುವವರ ಮೇಲೆ ಕಠಿಣ ಕ್ರಮ ಜರುಗಿಸುವ ಸ್ಪಷ್ಟ ಸಂದೇಶವನ್ನು ನರೇಂದ್ರ ಮೋದಿ ಸರ್ಕಾರ ನೀಡುತ್ತದೆ’ ಎಂದಿದ್ದಾರೆ.

‘ಎಂಎಲ್‌ಜೆಕೆ–ಎಂಎ ಸಂಘಟನೆಯನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ (ಯುಎಪಿಎ) ಅಡಿಯಲ್ಲಿ ನಿಷೇಧಿಸಲಾಗಿದೆ. ಈ ಸಂಘಟನೆಯ ಸದಸ್ಯರು ಜಮ್ಮು ಮತ್ತು ಕಾಶ್ಮೀರದಲ್ಲಿ ಇಸ್ಲಾಮಿಕ್ ಕಾನೂನು ಜಾರಿಗೊಳಿಸಲು ಜನರನ್ನು ಪ್ರಚೋದಿಸುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.

ಎಂಎಲ್‌ಜೆಕೆ–ಎಂಎ ಸಂಘಟನೆಯ ನೇತೃತ್ವವನ್ನು ಆಲ್ ಇಂಡಿಯಾ ಹುರಿಯತ್ ಕಾನ್ಫರೆನ್ಸ್ ಸಂಘಟನೆಯ ಹಂಗಾಮಿ ಮುಖ್ಯಸ್ಥ ಮಸರತ್ ಆಲಂ ವಹಿಸಿಕೊಂಡಿದ್ದಾರೆ.

ಸಂಘಟನೆಯ ನಿಷೇಧಕ್ಕೆ ಕಾರಣಗಳು

* ಭಾರತ ವಿರೋಧಿ ಮತ್ತು ಪಾಕಿಸ್ತಾನ ಪರ ಪ್ರಚಾರದಲ್ಲಿ ಭಾಗಿ

* ಪಾಕಿಸ್ತಾನ ಹಾಗೂ ಪಾಕ್ ಬೆಂಬಲಿತ ಸಂಘಟನೆಗಳಿಂದ ಹಣ ಪಡೆದ ಆರೋಪ

* ಸಂಘಟನೆಯ ಸದಸ್ಯರು ಸಂವಿಧಾನಕ್ಕೆ ಅಗೌರವ ತೋರಿ ಪ್ರತ್ಯೇಕತಾವಾದ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು

* ಸಂಘಟನೆಯ ಮುಖ್ಯಸ್ಥ ಮಸರತ್ ಆಲಂ ಅವರು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವುದು
.ವ್ಯಾಕರಣ ಪಾಠ ಹೇಳುವ ಮೊದಲು ಸ್ವತಃ ತಿದ್ದಿಕೊಳ್ಳಿ: ಸಿದ್ದರಾಮಯ್ಯ ವಿರುದ್ಧ ಪ್ರತಾಪ.ಅಣ್ಣ ಪ್ರತಾಪ ಸಿಂಹ ನಾಡಕಳ್ಳ, ತಮ್ಮ ವಿಕ್ರಂ ಸಿಂಹ ಕಾಡುಗಳ್ಳ: ಕಾಂಗ್ರೆಸ್ ಲೇವಡಿ.ಸೇನೆಯು ಕಾಶ್ಮೀರದಲ್ಲಿನ ಭಯೋತ್ಪಾದನೆಯನ್ನು ಕಿತ್ತೊಗೆಯಲಿದೆ: ರಾಜನಾಥ ಸಿಂಗ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.