ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇತರೆ ವಿಧಾನಗಳಿಂದ ಪ್ರಧಾನಿ ಮೋದಿ ಸ್ಥಾನ ತೆರವು: ಸುಬ್ರಮಣಿಯನ್ ಸ್ವಾಮಿ ಎಚ್ಚರಿಕೆ

Published 21 ಆಗಸ್ಟ್ 2024, 11:28 IST
Last Updated 21 ಆಗಸ್ಟ್ 2024, 11:28 IST
ಅಕ್ಷರ ಗಾತ್ರ

ನವದೆಹಲಿ: 75 ವರ್ಷ ದಾಟಿದ ನಾಯಕರನ್ನು ಸಕ್ರಿಯ ರಾಜಕಾರಣದಿಂದ ದೂರ ಇರಿಸುವ ಪರಿಪಾಟವು ಬಿಜೆಪಿಯಲ್ಲಿ ಇದೆ.

ಸಾಮಾಜಿಕ ಮಾಧ್ಯಮ 'ಎಕ್ಸ್‌'ನಲ್ಲಿ ಇದನ್ನೇ ಉಲ್ಲೇಖ ಮಾಡಿರುವ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ, 'ಆರ್‌ಎಸ್‌ಎಸ್ ಪ್ರಚಾರಕ ಸಂಸ್ಕಾರಕ್ಕೆ ಬದ್ಧರಾಗಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 17ರಂದು ತಮ್ಮ 75ನೇ ಹುಟ್ಟುಹಬ್ಬದ ನಂತರ ನಿವೃತ್ತಿ ಘೋಷಿಸದಿದ್ದರೆ, ಇತರೆ ವಿಧಾನಗಳಿಂದ ಅವರು ಪ್ರಧಾನಿ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ' ಎಂದು ಎಚ್ಚರಿಸಿದ್ದಾರೆ.

75 ವರ್ಷ ತುಂಬಿದ ಮೇಲೆ ಸಕ್ರಿಯ ರಾಜಕಾರಣದಿಂದ ದೂರ ಸರಿದ ಬಿಜೆಪಿಯ ಕೆಲವು ನಾಯಕರ ಉದಾಹರಣೆಗಳಿವೆ. ಆದರೆ ಸಕ್ರಿಯ ರಾಜಕಾರಣದಿಂದ ನಿವೃತ್ತಿಯಾಗಬೇಕು ಎಂದು ಪಕ್ಷವು ಎಲ್ಲೂ ಅಧಿಕೃತವಾಗಿ ಹೇಳಿಕೊಂಡಿಲ್ಲ.

ಮೋದಿಗೆ 75 ವರ್ಷ ತುಂಬಿದ ಬಳಿಕ ಅಮಿತ್ ಶಾ ಮುಂದಿನ ಪ್ರಧಾನಿ ಆಗಲಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಲೋಕಸಭೆ ಚುನಾವಣೆ ವೇಳೆ ಹೇಳಿಕೆ ನೀಡಿದ್ದರು. ಆದರೆ ಬಿಜೆಪಿಯಲ್ಲಿ ಇಂತಹದೊಂದು ನಿಯಮವಿಲ್ಲ ಎಂದು ಅಮಿತ್ ಶಾ ಸ್ಪಷ್ಟನೆ ಕೊಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT