ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೀಮನ್ ಬಗ್ಗೆ ಸಿಜೆಐ ಡಿ.ವೈ. ಚಂದ್ರಚೂಡ್ ಮೆಚ್ಚುಗೆ

Published 4 ಏಪ್ರಿಲ್ 2024, 15:55 IST
Last Updated 4 ಏಪ್ರಿಲ್ 2024, 15:55 IST
ಅಕ್ಷರ ಗಾತ್ರ

ನವದೆಹಲಿ: ಎಂಥದ್ದೇ ಸಂದರ್ಭ ಎದುರಾದರೂ ನ್ಯಾಯಕ್ಕಾಗಿ ದನಿ ಎತ್ತಲು ಸಿದ್ಧನಿದ್ದಾನೆಯೇ ಎಂಬುದು ನೀತಿವಂತ ವ್ಯಕ್ತಿಯ ಪಾಲಿನ ಅತಿದೊಡ್ಡ ಪರೀಕ್ಷೆ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ಹೇಳಿದರು. ಹಿರಿಯ ನ್ಯಾಯಶಾಸ್ತ್ರಜ್ಞ ಫಾಲಿ ಎಸ್. ನರೀಮನ್ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡುವ ಸಂದರ್ಭದಲ್ಲಿ ಅವರು ಈ ಮಾತು ಹೇಳಿದರು.

ನರೀಮನ್ ಗೌರವಾರ್ಥವಾಗಿ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಜೆಐ, ಅಂತಮ ದಿನದವರೆಗೂ ನರೀಮನ್ ಅವರು ಕಾನೂನಿಗೆ ಬದ್ಧತೆ ತೋರುವ ವಿಚಾರದಲ್ಲಿ, ಕೆಲಸದ ಮೇಲಿನ ಶ್ರದ್ಧೆಯ ವಿಚಾರವಾಗಿ ರಾಜಿ ಮಾಡಿಕೊಳ್ಳಲಿಲ್ಲ ಎಂದು ಶ್ಲಾಘಿಸಿದರು.

ನ್ಯಾಯದ ಪರವಾಗಿ ಮಾತನಾಡಲು ನರೀಮನ್ ಯಾವತ್ತೂ ಸಿದ್ಧರಿರುತ್ತಿದ್ದರು ಎಂದು ಸಿಜೆಐ ಹೇಳಿದರು. 1975ರಲ್ಲಿ ತುರ್ತು ಪರಿಸ್ಥಿತಿ ಹೇರಿದಾಗ ನರೀಮನ್ ಅವರು ಹೆಚ್ಚುವರಿ ಸಾಲಿಸಿಟರ್ ಜನರಲ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು ಎಂದು ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT