ಚಂಡೀಗಡ: ಪಂಜಾಬ್‌ನ ಪೊಲೀಸ್ ಮುಖ್ಯಸ್ಥ (ಡಿಜಿಪಿ) ಮತ್ತು ಅಡ್ವೊಕೇಟ್ ಜನರಲ್ ಅವರನ್ನು ಬದಲಿಸುವಂತೆ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಭಾನುವಾರ ಮತ್ತೊಮ್ಮೆ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚೆನ್ನಿ ಅವರನ್ನು ಒತ್ತಾಯಿಸಿದ್ದಾರೆ.

‘ಇಲ್ಲದಿದ್ದರೆ ನಾವು ಯಾರಿಗೂ ಮುಖ ತೋರಿಸಲಾಗುವುದಿಲ್ಲ’ ಎಂದು ಅವರು ಒತ್ತಿ ಹೇಳಿದ್ದಾರೆ. ಈ ಕುರಿತು ಅವರು ಟ್ವೀಟ್ ಮೂಲಕ ತಮ್ಮ ಅತೃಪ್ತಿಯನ್ನು ಹೊರಹಾಕಿದ್ದಾರೆ.

ಸಿಧು ಮತ್ತು ಮುಖ್ಯಮಂತ್ರಿ ಚನ್ನಿ ಅವರ ನಡುವೆ ಸಭೆ ನಡೆದ ಮೂರು ದಿನಗಳ ಬಳಿಕ ಈ ಬೆಳವಣಿಗೆ ಆಗಿದೆ. ಆ ಸಭೆಯಲ್ಲಿ ಸರ್ಕಾರದ ಎಲ್ಲ ಪ್ರಮುಖ ನಿರ್ಧಾರಗಳ ಕುರಿತು ಪೂರ್ವ ಸಮಾಲೋಚನೆಗಾಗಿ ಸಮನ್ವಯ ಸಮಿತಿಯನ್ನು ರಚಿಸಲು ನಿರ್ಧರಿಸಲಾಗಿತ್ತು.

ಓದಿ:ಹುದ್ದೆ ಇರಲಿ ಅಥವಾ ಇಲ್ಲದಿರಲಿ ರಾಹುಲ್, ಪ್ರಿಯಾಂಕಾ ಪರವಾಗಿ ನಿಲ್ಲುತ್ತೇನೆ: ಸಿಧು

‘ಸ್ಕಾಕ್ರಿಲೇಜ್ ಪ್ರಕರಣಗಳಲ್ಲಿ ನ್ಯಾಯ ಸಿಗಬೇಕು ಮತ್ತು ಡ್ರಗ್ ವ್ಯವಹಾರದಲ್ಲಿ ಶಾಮೀಲಾದವರನ್ನು ಬಧಿಸಬೇಕು ಎಂಬ ಒತ್ತಾಯದ ಕಾರಣಕ್ಕೇ 2017ರಲ್ಲಿ ಕಾಂಗ್ರೆಸ್ ಸರ್ಕಾರವನ್ನು ಜನರು ಆರಿಸಿದರು. ಆದರೆ ತಮ್ಮ ಕರ್ತವ್ಯದಲ್ಲಿ ಮುಖ್ಯಮಂತ್ರಿ ವಿಫಲರಾದುದರಿಂದ ಮುಖ್ಯಮಂತ್ರಿಯನ್ನು ಜನರು ತೆಗೆದು ಹಾಕಿದರು. ಈಗಿನ ಎಜಿ ಮತ್ತು ಡಿಜಿಪಿ ನೇಮಕಾತಿಗಳು ಸಂತ್ರಸ್ತರ ಗಾಯಗಳ ಮೇಲೆ ಉಪ್ಪು ಸುರಿದಂತಾಗುತ್ತದೆ. ಆದ್ದರಿಂದ ಈ ನಿರ್ಧಾರಗಳನ್ನು ಬದಲಿಸಬೇಕು. ಇಲ್ಲದಿದ್ದರೆ ನಮಗೆ ಮುಖ ತೋರಿಸಲು ಆಗುವುದಿಲ್ಲ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.