ನವದೆಹಲಿ: ಜಾರ್ಖಂಡ್ನಲ್ಲಿ ನಡೆದ ನಕ್ಸಲ್ ನಿಗ್ರಹ ಕಾರ್ಯಾಚರಣೆ ವೇಳೆ ಕಚ್ಚಾ ಬಾಂಬ್ ಸ್ಟೋಟದಿಂದ ತೀವ್ರವಾಗಿ ಗಾಯಗೊಂಡಿದ್ದ ಸಿಆರ್ಪಿಎಫ್ ಇನ್ಸ್ಪೆಕ್ಟರ್ ಗುರುವಾರ ಇಲ್ಲಿನ ಏಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಅಕ್ಟೋಬರ್ 10ರಂದು ಜಾರ್ಖಂಡ್ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆಯ ವೇಳೆ ನಕ್ಸಲರು ಹೂತಿಟ್ಟಿದ್ದ ಐಇಡಿ ಸ್ಟೋಟಗೊಂಡು ಇನ್ಸ್ಪೆಕ್ಟರ್ ಕೌಶಲ್ ಕುಮಾರ್ ಮಿಶ್ರಾ ಅವರ ಎಡಗಾಲಿಗೆ ತೀವ್ರ ಗಾಯವಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಕ್ಷಣ ಅವರನ್ನು ಜಾರ್ಖಂಡ್ನಿಂದ ವಿಮಾನದ ಮೂಲಕ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಿಸದೆ ಇಂದು ಮುಂಜಾನೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಅವರು ಹೇಳಿದ್ದಾರೆ.

ಬಿಹಾರದ ಮೂಲದವರಾದ ಮಿಶ್ರಾ ಅವರು ಸಿಆರ್ಪಿಎಫ್ನ 60ನೇ ಬೆಟಾಲಿಯನ್ಗೆ ನಿಯೋಜನೆಗೊಂಡಿದ್ದರು. ಸಿಂಗ್ಭೂಮ್ನ ಉತ್ತರಾ ಸರಾಂಡದ ಅರಣ್ಯ ಭಾಗದಲ್ಲಿ ಗಸ್ತು ತಿರುಗುವ ವೇಳೆ ಸ್ಫೋಟ ಸಂಭವಿಸಿತ್ತು.

ಈ ಸ್ಫೋಟದಲ್ಲಿ ಕಾನ್ಸ್ಟೆಬಲ್ ಮಹೇಂದ್ರ ಲಸ್ಕರ್ (45) ಸೇರಿದಂತೆ ಇನ್ನಿಬ್ಬರು ಸಿಬ್ಬಂದಿ ಗಾಯಗೊಂಡಿದ್ದರು. ಸ್ಟೋಟ ನಡೆದ ಮರುದಿನ ಅಸ್ಸಾಂ ಮೂಲದ ಲಸ್ಕರ್ ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.