NCB busts drug network, arrests Dawood aide in Goa

ನವದೆಹಲಿ: ಗೋವಾದಲ್ಲಿ ಕಾರ್ಯಾಚರಣೆ ನಡೆಸಿದ ಮಾದಕ ವಸ್ತು ನಿಯಂತ್ರಣ ಘಟಕವು(ಎನ್ಸಿಬಿ) ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಆಪ್ತ ಮತ್ತು ಮಾದಕ ದ್ರವ್ಯ ಸಿಂಡಿಕೇಟ್ನ ಕಿಂಗ್ಪಿನ್ ಡ್ಯಾನಿಶ್ ಚಿಕ್ನಾನನ್ನು ಬಂಧಿಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ತಲೆಮರೆಸಿಕೊಂಡಿದ್ದ ಡ್ಯಾನಿಶ್ ಚಿಕ್ನಾ ಅಲಿಯಾಸ್ ಡ್ಯಾನಿಶ್ ಮರ್ಚೆಂಟ್, ದೇಶದಲ್ಲಿ ದಾವೂದ್ ಗ್ಯಾಂಗ್ಗೆ ಸಂಬಂಧಿಸಿದ ಮಾದಕ ದ್ರವ್ಯ ಜಾಲದ ಕಾರ್ಯಾಚರಣೆಗಳನ್ನು ನೋಡಿಕೊಳ್ಳುತ್ತಿದ್ದ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಡ್ಯಾನಿಶ್ ಮತ್ತು ಇತರ ಮೂವರು ವ್ಯಕ್ತಿಗಳನ್ನು ಬಂಧಿಸಿದ ಎನ್ಸಿಬಿ, ಅವರ ಬಳಿಯಿಂದ 1.341 ಕೆಜಿ ಮೆಫೆಡ್ರೋನ್ ವಶಪಡಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ.

ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಮುಂಬೈನ ಎನ್ಸಿಬಿಯು ಸೆಪ್ಟೆಂಬರ್ 18ರಂದು ಪುಣೆಯಲ್ಲಿ ಕಾರ್ಯಾಚರಣೆ ನಡೆಸಿ ಒಬ್ಬ ವ್ಯಕ್ತಿಯ ಬಳಿಯಿಂದ 502 ಗ್ರಾಂ ಮೆಫೆಡ್ರೋನ್ ಅನ್ನು ವಶಪಡಿಸಿಕೊಂಡಿತ್ತು. ಆತ ನೀಡಿದ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಎನ್ಸಿಬಿ, ಡ್ಯಾನಿಶ್ ಮತ್ತು ಆತನ ಹೆಂಡತಿ ವಾಸವಿರುವ ಮುಂಬೈನ ಮನೆಯಲ್ಲಿ ಇನ್ನೊಬ್ಬ ವ್ಯಕ್ತಿಯಿಂದ 839 ಗ್ರಾಂ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ತನಿಖೆ ವೇಳೆ ಡ್ಯಾನಿಶ್ ಮತ್ತು ಆತನ ಪತ್ನಿ ಡ್ರಗ್ಸ್ ಸಿಂಡಿಕೇಟ್ ನಡೆಸುತ್ತಿರುವುದು ಪತ್ತೆಯಾಗಿದೆ. ಬೇರೆ ಬೇರೆ ರಾಜ್ಯಗಳಿಗೆ ಸಂಚಾರ ಮಾಡುತ್ತಿದ್ದ ಅವರು ಡ್ರಗ್ಸ್ ಜಾಲದ ಕುರಿತಂತೆ ಮರೆಮಾಚಲು ಯತ್ನಿಸುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.

ತೀವ್ರ ತನಿಖೆ ಬಳಿಕ ಅವರು ಗೋವಾದ ಹಾಲಿ ಡೇ ರೆಸಾರ್ಟ್ನಲ್ಲಿ ಪತ್ತೆಯಾದರು. ಅಕ್ಟೋಬರ್ 25ರಂದು ಅವರನ್ನು ವಿಚಾರಣೆ ನಡೆಸಿ ಎನ್ಸಿಬಿ ವಶಖ್ಕೆ ಪಡೆದಿದೆ.

ಡ್ಯಾನಿಶ್ ಒಬ್ಬ ಮಾದಕ ದ್ರವ್ಯ ಕಳ್ಳಸಾಗಣೆದಾರನಾಗಿದ್ದು, ಎನ್ಸಿಬಿ ಮತ್ತು ರಾಜಸ್ಥಾನ ಪೊಲೀಸರು ಈ ಹಿಂದೆ ಆತನ ವಿರುದ್ಧ ಮಾದಕ ದ್ರವ್ಯ ಮತ್ತು ಮನೋವಿಕೃತ ವಸ್ತುಗಳ (ಎನ್ಡಿಪಿಎಸ್) ಕಾಯ್ದೆಯಡಿ ಮೂರು ಪ್ರಕರಣಗಳನ್ನು ದಾಖಲಿಸಿದ್ದರು.

ಮುಂಬೈ ಪೊಲೀಸರು ಆತನ ವಿರುದ್ಧ ಏಳು ಕ್ರಿಮಿನಲ್ ಪ್ರಕರಣಗಳನ್ನು ಸಹ ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.