ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರ: TDP–BJP–ಜನಸೇವಾ ನಡುವೆ ಸೀಟು ಹಂಚಿಕೆ: ಯಾವ ಪಕ್ಷಕ್ಕೆ ಎಷ್ಟು ಕ್ಷೇತ್ರ?

Published 12 ಮಾರ್ಚ್ 2024, 15:34 IST
Last Updated 12 ಮಾರ್ಚ್ 2024, 15:34 IST
ಅಕ್ಷರ ಗಾತ್ರ

ಅಮರಾವತಿ(ಆಂಧ್ರಪ್ರದೇಶ): ಲೋಕಸಭೆ ಚುನಾವಣೆ ಮತ್ತು ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಗೆ ಎನ್‌ಡಿಐ ಮೈತ್ರಿಕೂಟದ ಸದಸ್ಯ ಪಕ್ಷಗಳಾದ ಬಿಜೆಪಿ, ಟಿಡಿಪಿ ಮತ್ತು ಜನಸೇನಾ ಸೀಟು ಹಂಚಿಕೆ ಸೂತ್ರವನ್ನು ಅಂತಿಮಗೊಳಿಸಿವೆ.

ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಎನ್‌.ಚಂದ್ರಬಾಬು ನಾಯ್ಡು, ಬಿಜೆಪಿ ನಾಯಕರಾದ ಗಜೇಂದ್ರ ಸಿಂಗ್ ಶೆಖಾವತ್, ಜನಸೇನಾ ಮುಖ್ಯಸ್ಥ ಪವನ್‌ ಕಲ್ಯಾಣ್ ನಡುವೆ ನಡೆದ ಸುದೀರ್ಘ ಚರ್ಚೆಯ ನಂತರ ಸೀಟುಹಂಚಿಕೆ ಕುರಿತು ಅಂತಿಮ ತೀರ್ಮಾನಕ್ಕೆ ಬರಲಾಯಿತು.

‘ಅಮರಾವತಿಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿ, ಟಿಡಿಪಿ, ಜೆಎಸ್‌ಪಿ ನಾಯಕರು ಸೇರಿ ಸೀಟು ಹಂಚಿಕೆ ಸೂತ್ರ ಅಂತಿಮಗೊಳಿಸಿದ್ದೇವೆ. ಈ ಪ್ರಮುಖ ಹೆಜ್ಜೆಯೊಂದಿಗೆ ಆಂಧ್ರಪ್ರದೇಶದ ಜನರು ಅಭಿವೃದ್ಧಿಯೊಂದಿಗೆ ಈಗ ಭವ್ಯ ಭವಿಷ್ಯದ ಹಾದಿಯನ್ನು ಎದುರುನೋಡಬಹುದಾಗಿದೆ. ಈ ಮೈತ್ರಿಗೆ ಜನತೆ ಆಶೀರ್ವದಿಸಬೇಕು ಎಂದು ಕೋರುತ್ತೇನೆ’ ಎಂದು ಚಂದ್ರಬಾಬುನಾಯ್ಡು ‘ಎಕ್ಸ್‌’ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ರಾಜ್ಯದಲ್ಲಿ ಒಟ್ಟಾಗಿ ಲೋಕಸಭೆಯ 25  ಹಾಗೂ ವಿಧಾನಸಭೆಯ 175 ಕ್ಷೇತ್ರಗಳಿವೆ. ರಾಜ್ಯದಲ್ಲಿ ಮೂರೂ ಪಕ್ಷಗಳು ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿರುವುದು ಇದೇ ಮೊದಲು. 2014ರಲ್ಲಿ ಬಿಜೆಪಿ ಮತ್ತು ಟಿಡಿಪಿ ಮೈತ್ರಿಯಾಗಿ ಚುನಾವಣೆ ಎದುರಿಸಿದ್ದವು.

ಟಿಡಿಪಿ ಮತ್ತು ಜನಸೇನಾ ಈಗಾಗಲೇ ಒಟ್ಟಾಗಿ 100 ಅಭ್ಯರ್ಥಿಗಳ ಹೆಸರು ಪ್ರಕಟಿಸಿವೆ. ಉಳಿದ ಇತರೆ ಕ್ಷೇತ್ರಗಳಿಗೂ ಆಯಾ ಪಕ್ಷಗಳು ಶೀಘ್ರದಲ್ಲಿಯೇ ಅಭ್ಯರ್ಥಿಗಳನ್ನು ಘೋಷಿಸಲಿವೆ ಎಂದು ನಾಯ್ಡು ತಿಳಿಸಿದ್ದಾರೆ.

ಮಾರ್ಚ್‌ 17–20ರ ಅವಧಿಯಲ್ಲಿ ರಾಜ್ಯದಲ್ಲಿ ಚುನಾವಣಾ ಸಮಾವೇಶ ಆಯೋಜಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗಿದ್ದು, ಆಗಮಿಸುವ ವಿಶ್ವಾಸವಿದೆ. ಸಮಾವೇಶ ಬಹುತೇಕ ಮಾರ್ಚ್ 17ರಂದು ನಡೆಯಲಿದೆ ಎಂದು ತಿಳಿಸಿದರು.

ಒಂದು ವೇಳೆ ಪ್ರಧಾನಿ ಅವರು ಭಾಗವಹಿಸಿದ್ದೇ ಆದರೆ ಇದೇ ಮೊದಲ ಬಾರಿಗೆ ಮೋದಿ, ಚಂದ್ರಬಾಬು ನಾಯ್ಡು ಮತ್ತು ಪವನ್ ಕಲ್ಯಾಣ್ ಅವರು ಒಂದೇ ವೇದಿಕೆಯನ್ನು ಹಂಚಿಕೊಂಡಂತಾಗುತ್ತದೆ.

ಪಕ್ಷ;ಲೋಕಸಭೆ;ವಿಧಾನಸಭೆ

ಟಿಡಿಪಿ : 17 : 144

ಬಿಜೆಪಿ : 06 : 10

ಜನಸೇನಾ : 02 : 21

ಪವನ್‌ ಕಲ್ಯಾಣ್
ಪವನ್‌ ಕಲ್ಯಾಣ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT