ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತದಲ್ಲಿ ಶೇ 50ರಷ್ಟು ವಯಸ್ಕರು ದೈಹಿಕವಾಗಿ ಕ್ರಿಯಾಶೀಲರಾಗಿಲ್ಲ: ಲ್ಯಾನ್ಸೆಟ್

Published 26 ಜೂನ್ 2024, 11:31 IST
Last Updated 26 ಜೂನ್ 2024, 11:31 IST
ಅಕ್ಷರ ಗಾತ್ರ

ನವದೆಹಲಿ: ಭಾರತದಲ್ಲಿ ಶೇ 50ರಷ್ಟು ವಯಸ್ಕರು ದೈಹಿಕವಾಗಿ ಸಕ್ರಿಯವಾಗಿಲ್ಲ ಎಂದು ಲ್ಯಾನ್ಸೆಟ್‌ ನಿಯತಕಾಲಿಕೆ ಪ್ರಕಟಿಸಿರುವ ಸಂಶೋಧನೆಯೊಂದು ತಿಳಿಸಿದೆ.

ಭಾರತದಲ್ಲಿ ಪುರುಷರಿಗೆ (ಶೇ 42) ಹೋಲಿಸಿದರೆ ಹೆಚ್ಚು ಮಹಿಳೆಯರು (ಶೇ 57) ದೈಹಿಕವಾಗಿ ಸಕ್ರಿಯವಾಗಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

ಏಷ್ಯಾ–ಪೆಸಿಫಿಕ್ ಭಾಗದಲ್ಲಿ ವಯಸ್ಕರು ದೈಹಿಕವಾಗಿ ಕ್ರಿಯಾಶೀಲರಾಗಿಲ್ಲದ ವಿಷಯದಲ್ಲಿ ಭಾರತ ಸೇರಿ ದಕ್ಷಿಣ ಏಷ್ಯಾದ ಪ್ರದೇಶವು ಎರಡನೇ ಸ್ಥಾನದಲ್ಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಸೇರಿದಂತೆ ಅಂತರರಾಷ್ಟ್ರೀಯ ಸಂಶೋಧಕರ ತಂಡ ಹೇಳಿದೆ.

ಜಾಗತಿಕವಾಗಿ ವಯಸ್ಕರಲ್ಲಿ ಮೂರನೇ ಒಂದು ಭಾಗದಷ್ಟು (ಶೇ 31.3) ಜನರು ದೈಹಿಕವಾಗಿ ಸಕ್ರಿಯವಾಗಿಲ್ಲ. ವಯಸ್ಕರು ವಾರಕ್ಕೆ ಕನಿಷ್ಠ 150 ನಿಮಿಷಗಳ ಮಧ್ಯಮ-ತೀವ್ರತೆಯ ದೈಹಿಕ ಚಟುವಟಿಕೆ ಅಥವಾ ವಾರಕ್ಕೆ 75 ನಿಮಿಷಗಳ ತೀವ್ರ ದೈಹಿಕ ಚಟುವಟಿಕೆ ನಿರ್ವಹಿಸುವುದಿಲ್ಲ ಎಂದು ಸಂಶೋಧಕರ ತಂಡ ವಿವರಿಸಿದೆ.

2000 ಇಸವಿಯಲ್ಲಿ ಭಾರತದಲ್ಲಿ ದೈಹಿಕವಾಗಿ ಕ್ರಿಯಾಶೀಲರಲ್ಲದವರ ಸಂಖ್ಯೆ ಶೇ 22ರಷ್ಟಿತ್ತು. 2010ರ ಹೊತ್ತಿಗೆ ಇದು ಶೇ 34ಕ್ಕೆ ಏರಿಕೆಯಾಯಿತು. ಈಗ ಇದು ಶೇ 50ಕ್ಕೆ ತಲುಪಿದೆ. 2030ರ ಹೊತ್ತಿಗೆ ದೈಹಿಕವಾಗಿ ಕ್ರಿಯಾಶೀಲರಲ್ಲದವರ ಸಂಖ್ಯೆ ಶೇ 60ಕ್ಕೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT