ಹೈದರಾಬಾದ್: ಹವಾಮಾನ ಬದಲಾವಣೆ ಹೋರಾಟದ ಕುರಿತಾದ ನಿಲುವನ್ನು ಬದಲಾಯಿಸುತ್ತೇನೆ, ಪರಿಸರವನ್ನು 'ಉಳಿಸುವ' ನಿಲುವಿನಿಂದ, ಪರಿಸದ ಜೊತೆ ಮನುಷ್ಯರು 'ಸಹಬಾಳ್ವೆ'ಯಿಂದ ಬದುಕುವಂತಾಗಬೇಕು ಎಂದು ನೇಪಾಳಿ ರೂಪದರ್ಶಿ ಶ್ರೀಚ್ಛ ಪ್ರಧಾನ್ ಹೇಳಿದ್ದಾರೆ.

ಹೈದರಾಬಾದ್ನಲ್ಲಿ ಜರುಗುತ್ತಿರುವ 72ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ನೇಪಾಳ ದೇಶದ ಪ್ರತಿನಿಧಿಯಾಗಿ ಅವರು ಭಾಗವಹಿಸಿದ್ದಾರೆ.

ನಾನು ನನ್ನ ಜೀವನ ಪೂರ್ತಿ, ಪರಿಸರವಾದಿಯಾಗಿರಲು ಇಷ್ಟಪಡುತ್ತೇನೆ. ನಾನು ಚಿಕ್ಕವಳಿದ್ದಾಗಿನಿಂದ ಪರಿಸರ ರಕ್ಷಣೆಯಲ್ಲಿ ಆಸಕ್ತಿಯಿತ್ತು. ನಾನು ತೊಡುವ ಬಟ್ಟೆ ಹಾಗೂ ಮೇಕಪ್ ಕೂಡ ಪರಿಸರ ಸ್ನೇಹಿಯಾಗಿದೆ ಎಂದರು.

ನಾನು ಪರಿಸರವನ್ನು ಉಳಿಸಲು ಹೊರಟಿಲ್ಲ. ಬದಲಾಗಿ ಪರಿಸರ ಜೊತೆಗಿರಲು ಪ್ರಯತ್ನ ಮಾಡಬೇಕು ಎಂದು ಆನಂತರ ಅರಿವಾಗಿದೆ ಎಂದರು.

ವಿಶ್ವ ಸುಂದರಿ ಸ್ಪರ್ಧೆಯ ವೇದಿಕೆಯನ್ನು, ಪರಿಸರ ರಕ್ಷಣೆಗಾಗಿ ಕೈಗೊಂಡಿರುವ 'ಬ್ಯೂಟಿ ವಿಥ್ ಎ ಪರ್ಪಸ್'(ಬಿಡಬ್ಲೂಎಪಿ) ಯೋಜನೆಯ ಪ್ರಚಾರಕ್ಕಾಗಿ ಬಳಸಿಕೊಳ್ಳುವುದಾಗಿ ಹೇಳಿದರು.

ನನ್ನ ಹೋರಾಟವು ತಾಪಮಾನವನ್ನು ಸರಿಯಾಗಿಡುವುದಕ್ಕೆ ಸೀಮಿತವಾಗಿಲ್ಲ. ಬದಲಾಗಿ, ಭೂಮಿ, ಜಲ, ಅಗ್ನಿ, ವಾಯು ಮುಂತಾದ ಪಂಚ ಭೂತ ಅಂಶಗಳನ್ನು ಉಳಿಸಿಕೊಂಡು ಹೋಗುವುದಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.