ಕೋಲ್ಕತ್ತ: ಅಮೆಜಾನ್ ಹೆಸರಿನಲ್ಲಿ ನಕಲಿ ಕಾಲ್ ಸೆಂಟರ್ ತೆರೆದು ಜನರನ್ನು ಮೋಸದ ಜಾಲಕ್ಕೆ ಬೀಳಿಸುತ್ತಿದ್ದ 22 ಜನರನ್ನು ನ್ಯೂ ಆಲಿಪುರದಲ್ಲಿ ಬಂಧಿಸಲಾಗಿದೆ.

ಬಂಕಿಮ್ ಮುಖರ್ಜಿ ಸಾರಣಿ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿದ್ದ ಕಾಲ್ ಸೆಂಟರ್ ಮೇಲೆ ಮಂಗಳವಾರ ರಾತ್ರಿ ಕೋಲ್ಕತ್ತ ಪೊಲೀಸ್ ಪತ್ತೇದಾರಿ ಇಲಾಖೆ ದಾಳಿ ನಡೆಸಿತ್ತು. ಯಾವುದೇ ಅಧಿಕೃತ ದಾಖಲೆಗಳು ಇಲ್ಲದೆಯೇ ಆರೋಪಿಗಳು ಕಾಲ್ ಸೆಂಟರ್ ನಡೆಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

'ಇಂಟರ್ನೆಟ್ ಸಂಪರ್ಕ ವ್ಯವಸ್ಥೆಯ ಮೂಲಕ ಜನರಿಗೆ ಕರೆ ಮಾಡುತ್ತಿದ್ದ ಆರೋಪಿಗಳು ಅಮೆಜಾನ್ ಸಿಬ್ಬಂದಿ ಎಂದು ಪರಿಚಯಿಸಿಕೊಳ್ಳುತ್ತಿದ್ದರು. ಜನರ ನಂಬಿಕೆ ಗಳಿಸಿ, ಅವರ ಉಡುಗೊರೆ ಮೊತ್ತವು ಜಮೆಯಾಗುತ್ತಿರುವುದಾಗಿ ತಿಳಿಸುತ್ತಿದ್ದರು' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೋಸಕ್ಕೆ ಒಳಗಾಗಿರುವ ಬಹುತೇಕರು ಆಸ್ಟ್ರೇಲಿಯಾದ ನಿವಾಸಿಗಳಾಗಿದ್ದಾರೆ.

'ಆರೋಪಿಗಳು ಟೀಂವ್ಯೂವರ್ ಮತ್ತು ಎನಿಡೆಸ್ಕ್ ರೀತಿಯ ಸಾಫ್ಟ್ವೇರ್ಗಳನ್ನು ಬಳಸಿಕೊಂಡು ಜನರ ಕಂಪ್ಯೂಟರ್ ಮೇಲೆ ನಿಯಂತ್ರಣ ಸಾಧಿಸುತ್ತಿದ್ದರು ಹಾಗೂ ಆಸ್ಟ್ರೇಲಿಯಾ ಡಾಲರ್ನಲ್ಲೇ ಪಾವತಿಸುವಂತೆ ಒತ್ತಾಯಿಸುತ್ತಿದ್ದರು' ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಕಾಲ್ ಸೆಂಟರ್ನಿಂದ ಹಲವು ದಾಖಲೆಗಳು ಹಾಗೂ ಆರೋಪ ಸಾಬೀತು ಪಡಿಸುವ ಸಾಕ್ಷ್ಯಗಳನ್ನು ವಶಕ್ಕೆ ಪಡೆಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.