ನವದೆಹಲಿ: ‘ಆದಾಯ ತೆರಿಗೆ ಇಲಾಖೆಯು ‘ಆದಾಯ ತೆರಿಗೆ ಕಾಯ್ದೆ–2025’ರ ಅಡಿಯಲ್ಲಿ ಸರಳೀಕೃತ ಐಟಿಆರ್ ಫಾರ್ಮ್ ಹಾಗೂ ನಿಯಮಗಳ ಜಾರಿ ಕುರಿತು ಜನವರಿಯಲ್ಲಿ ಅಧಿಸೂಚನೆ ಹೊರಡಿಸಲಿದೆ’ ಎಂದು ಕೇಂದ್ರ ನೇರ ತೆರಿಗೆಗಳ ಮಂಡಳಿಯ (ಸಿಬಿಡಿಟಿ) ಅಧ್ಯಕ್ಷ ರವಿ ಅಗರ್ವಾಲ್ ತಿಳಿಸಿದ್ದಾರೆ.

ಭಾರತ ಅಂತರರಾಷ್ಟ್ರೀಯ ವ್ಯಾಪಾರ ಮೇಳ (ಐಐಟಿಎಫ್)ದಲ್ಲಿ ಸೋಮವಾರ ಮಾತನಾಡಿದ ಅವರು,‘ಇದು ಮುಂದಿನ ಆರ್ಥಿಕ ವರ್ಷ ಏಪ್ರಿಲ್ 1ರಿಂದಲೇ ಜಾರಿಗೆ ಬರಲಿದೆ. ಹೊಸ ಕಾನೂನಿನ ಅಡಿಯಲ್ಲಿ ಐಟಿಆರ್ ರಿಟರ್ನ್ ಫಾರ್ಮ್ಗಳನ್ನು ಮತ್ತಷ್ಟು ಸರಳಗೊಳಿಸಲಿದೆ. 1961ರಿಂದ ಜಾರಿಗೆಯಲ್ಲಿರುವ ಆದಾಯ ತೆರಿಗೆ ಕಾಯ್ದೆಯನ್ನು ಬದಲಾಯಿಸಲಿದೆ’ ಎಂದು ಅವರು ಹೇಳಿದ್ದಾರೆ.

‘ಹೊಸ ಫಾರ್ಮ್ ಹಾಗೂ ವಿನ್ಯಾಸ ರಚನೆಯ ಕುರಿತ ಪ್ರಕ್ರಿಯೆ ನಡೆಯುತ್ತಿದೆ. ಜನವರಿ ವೇಳೆಗೆ ಇದು ತೆರಿಗೆ ಪಾವತಿದಾರರಿಗೆ ಲಭ್ಯವಾಗಲಿದ್ದು, ಹೊಸ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಸಾಕಷ್ಟು ಸಮಯವೂ ಲಭ್ಯವಾಗಲಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಆಗಸ್ಟ್ 12ರಂದು ‘ಆದಾಯ ತೆರಿಗೆ ಕಾಯ್ದೆ–2025’ ಸಂಸತ್ ಅಂಗೀಕರಿಸಿತ್ತು. ಹೊಸ ಕಾಯ್ದೆಯು ಯಾವುದೇ ಹೊಸ ತೆರಿಗೆಯನ್ನು ವಿಧಿಸುತ್ತಿಲ್ಲ, ಬದಲಾಗಿ ತೆರಿಗೆ ಕಾಯ್ದೆಯನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ಸರಳ ಭಾಷೆಯಲ್ಲಿ ವಿವರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.