ಮಂಗಳವಾರ, 5 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ತಿದ ಏಣಿ ಒದೆಯುವ ಚಾಳಿ: ಟಿ.ಎ. ಶರವಣ

Published 3 ಅಕ್ಟೋಬರ್ 2023, 16:22 IST
Last Updated 3 ಅಕ್ಟೋಬರ್ 2023, 16:22 IST
ಅಕ್ಷರ ಗಾತ್ರ

ಬೆಂಗಳೂರು: ‘ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರ ಕುರಿತು ಕೀಳುಮಟ್ಟದ ಹೇಳಿಕೆ ನೀಡುವ ಮೂಲಕ ವಸತಿ ಸಚಿವ ಜಮೀರ್‌ ಅಹಮದ್ ಖಾನ್‌ ಅವರು ಹತ್ತಿದ ಏಣಿ ಒದೆಯುವ ಚಾಳಿ ಪ್ರದರ್ಶಿಸಿದ್ದಾರೆ’ ಎಂದು ವಿಧಾನ ಪರಿಷತ್‌ನ ಜೆಡಿಎಸ್‌ ಸದಸ್ಯ ಟಿ.ಎ. ಶರವಣ ಟೀಕಿಸಿದ್ದಾರೆ.

ಜಮೀರ್‌ ಹೇಳಿಕೆ ಕುರಿತು ಮಂಗಳವಾರ ಪ್ರತಿಕ್ರಿಯಿಸಿದ ಅವರು, ‘ಜಮೀರ್‌ ಅವರು ತಾವೇ ಬಸ್‌ ಚಲಾಯಿಸಿಕೊಂಡು ರಾಜಭವನಕ್ಕೆ ಕರೆದೊಯ್ದಾಗ ಕುಮಾರಸ್ವಾಮಿ ಅವರು ಯಾವ ಚಡ್ಡಿ ಹಾಕಿದ್ದರೋ, ಈಗಲೂ ಅಂತಹದ್ದೇ ಚಡ್ಡಿ ಹಾಕಿದ್ದಾರೆ. ಕುಮಾರಸ್ವಾಮಿ ಯಾವತ್ತೂ ಬದಲಾಗಿಲ್ಲ. ರಾಜಭವನಕ್ಕೆ ಕರೆದೊಯ್ಯುವಾಗ ಜಮೀರ್‌ ಅವರಿಗೆ ಪರಿವೆ ಇರಲಿಲ್ಲವೆ’ ಎಂದು ಕೇಳಿದ್ದಾರೆ.

‘ಕುಮಾರಸ್ವಾಮಿ ಅವರು ಅಲ್ಪಸಂಖ್ಯಾತರ ವಿರುದ್ಧ ಮಾತನಾಡಿಲ್ಲ. ಅಲ್ಪಸಂಖ್ಯಾತರು ತಮ್ಮ ಸ್ವತ್ತು ಎಂದು ಭಾವಿಸಿ ಸಚಿವರು ಹೇಳಿಕೆ ನೀಡುವುದು ಸರಿಯಲ್ಲ. ಕುಮಾರಸ್ವಾಮಿ ಅವರ ಜತೆಗಿದ್ದು, ಅವರಿಂದಲೇ ರಾಜಕೀಯವಾಗಿ ಎತ್ತರಕ್ಕೇರಿ ಈಗ ಅವರನ್ನೇ ನಿಂದಿಸುತ್ತಿದ್ದಾರೆ. ಇದು ಅವರ ಮಟ್ಟವನ್ನು ತೋರಿಸುತ್ತದೆ’ ಎಂದಿದ್ದಾರೆ.

‘ಜಮೀರ್‌ ಅವರಿಗೆ ರಾಜಕೀಯ ಜೀವನ ನೀಡಿದ್ದು ಜೆಡಿಎಸ್‌. ಅದನ್ನು ಮರೆತು ನಮ್ಮ ಪಕ್ಷ ಮತ್ತು ನಾಯಕರನ್ನು ನಿಂದಿಸುತ್ತಿದ್ದಾರೆ. ಹತ್ತಿದ ಏಣಿಯನ್ನು ಒದೆಯುವ ಈ ನಡತೆ ಸರಿಯಲ್ಲ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT