ನವದೆಹಲಿ: ‘ನ್ಯೂಸ್ಕ್ಲಿಕ್’ ಸುದ್ದಿ ಪೋರ್ಟಲ್ನ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ ಪ್ರಬೀರ್ ಪುರಕಾಯಸ್ಥ ಅವರಿಗೆ ದೆಹಲಿ ಹೈಕೋರ್ಟ್ ಬುಧವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಚೀನಾ ಪರ ಪ್ರಚಾರ ಮಾಡಲು ಹಣ ಪಡೆದ ಆರೋಪದಡಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು.

ಜಾರಿ ನಿರ್ದೇಶನಾಲಯ (ಇ.ಡಿ) ದಾಖಲಿಸಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲೂ ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರು ಇದೇ ರೀತಿಯ ಆದೇಶ ನೀಡಿದ್ದಾರೆ. ಪುರಕಾಯಸ್ಥ ಅವರ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಈ ಆದೇಶ ನೀಡಿದೆ.

ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯು) ದಾಖಲಿಸಿದ ಪ್ರಕರಣದಲ್ಲಿ ‘ನ್ಯೂಸ್ಕ್ಲಿಕ್’ ನಿರ್ದೇಶಕರಾದ ಪ್ರಾಂಜಲ್ ಪಾಂಡೆ ಅವರಿಗೂ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. 2021ರಲ್ಲಿ, ಪುರಕಾಯಸ್ಥ ಹಾಗೂ ಪಾಂಡೆ ಅವರನ್ನು ಬಂಧಿಸದಂತೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿತ್ತು.

2018–19ನೇ ಸಾಲಿನಲ್ಲಿ ವರ್ಲ್ಡ್ವೈಡ್ ಮೀಡಿಯಾ ಹೋಲ್ಡಿಂಗ್ಸ್ ಎಲ್ಎಲ್ಸಿ ಯುಎಸ್ಎದಿಂದ ₹9.59 ಕೋಟಿ ವಿದೇಶಿ ನೇರ ಹೂಡಿಕೆಯನ್ನು ಪಿಪಿಕೆ ನ್ಯೂಸ್ಕ್ಲಿಕ್ ಸ್ಟುಡಿಯೊ ಪ್ರೈವೇಟ್ ಲಿಮಿಟೆಡ್ ಪಡೆದಿತ್ತು ಎಂದು ಇಒಡಬ್ಲ್ಯು ಆರೋಪಿಸಿತ್ತು.
.ನ್ಯೂಸ್ಕ್ಲಿಕ್ ಪ್ರಕರಣ | ಪುರಕಾಯಸ್ಥ ವಿರುದ್ಧ ಸಾಕ್ಷ್ಯ ಇದೆ: ನ್ಯಾಯಾಲಯ.ನ್ಯೂಸ್ಕ್ಲಿಕ್ ಪ್ರಕರಣ: ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ.ನ್ಯೂಸ್ಕ್ಲಿಕ್ ಪ್ರಕರಣ: ಸರ್ಕಾರದ ಪರ ಸಾಕ್ಷ್ಯ, ಕೋರ್ಟ್ಗೆ ಆರೋಪಿ ಅರ್ಜಿ.ನ್ಯೂಸ್ಕ್ಲಿಕ್ ಪ್ರಕರಣ: ದೆಹಲಿ ಪೊಲೀಸರಿಗೆ ಸುಪ್ರೀಂ ಕೋರ್ಟ್ ನೋಟಿಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.