ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ISIS ಜೊತೆಯಾಗಿ ಸಂಚು: ಅಲಿಗಢ್ ಮುಸ್ಲಿಂ ವಿವಿಯ 19 ವರ್ಷದ ವಿದ್ಯಾರ್ಥಿ ಬಂಧನ

ಉತ್ತರ ಪ್ರದೇಶದ ಅಲಿಗಢ್ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಫೈಜಾನ್ ಅನ್ಸಾರಿ ಎನ್‌ಐಎನಿಂದ ಬಂಧನ
Published 21 ಜುಲೈ 2023, 10:23 IST
Last Updated 21 ಜುಲೈ 2023, 10:23 IST
ಅಕ್ಷರ ಗಾತ್ರ

ಅಲಿಗಢ್, ಉತ್ತರ ಪ್ರದೇಶ: ಐಸಿಸ್ ಉಗ್ರಗಾಮಿ ಸಂಘಟನೆ ಬೆಂಬಲದೊಂದಿಗೆ ಭಾರತದಲ್ಲಿ ದಾಳಿ ನಡೆಸಲು ಯೋಜಿಸಿದ್ಧ ಆರೋಪದ ಮೇಲೆ ಉತ್ತರ ಪ್ರದೇಶದ ಅಲಿಗಢ್ ಮುಸ್ಲಿಂ ವಿಶ್ವವಿದ್ಯಾಲಯದ (AMU) 19 ವರ್ಷದ ವಿದ್ಯಾರ್ಥಿಯನ್ನು ರಾಷ್ಟ್ರೀಯ ತನಿಖಾ ದಳದ (NIA) ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಬಂಧಿತನನ್ನು ಜಾರ್ಖಂಡ್ ಮೂಲದ ಲೋಹರ್‌ದಾಗ್ ಮೂಲದ ಫೈಜಾನ್ ಅನ್ಸಾರಿ ಎಂದು ಗುರುತಿಸಲಾಗಿದೆ.

‘ಫೈಜಾನ್ ಅನ್ಸಾರಿ ಸಾಮಾಜಿಕ ಮಾಧ್ಯಮಗಳ ಮೂಲಕ ಐಸಿಎಸ್ ಸಂಘಟನೆಯ ಸದಸ್ಯರ ಜೊತೆ ಸಂಪರ್ಕದಲ್ಲಿದ್ದ ಎಂದು ತಿಳಿದು ಬಂದಿತ್ತು. ಅನುಮಾನದ ಆಧಾರದ ಮೇಲೆ ಫೈಜಾನ್‌ನ ಲೋಹರ್‌ದಾಗ್ ಮನೆ ಹಾಗೂ ಆಲಿಗಢ್‌ನ ಬಾಡಿಗೆ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿ, ವಿವಿಧ ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಎನ್‌ಐಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಇರಾಕ್–ಸಿರಿಯಾದಲ್ಲಿ ಸಕ್ರಿಯವಾಗಿರುವ ಐಸಿಸ್ ಉಗ್ರಗಾಮಿ ಸಂಘಟನೆಯನ್ನು ಭಾರತದಲ್ಲಿ ಬೆಳೆಸುವುದು. ಅದಕ್ಕಾಗಿ ಯುವಕರನ್ನು ನೇಮಕ ಮಾಡಿಕೊಂಡು ಭಾರತದಲ್ಲಿ ದಾಳಿ ನಡೆಸುವ ತಯಾರಿಯಲ್ಲಿ ಆರೋಪಿ ಇದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನೊಂದೆಡೆ ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ಪಡೆ ಎಟಿಎಸ್ ಪೊಲೀಸರು ಸಹರಾನ್ಪುರ್‌ನಲ್ಲಿ ಇಬ್ಬರು ಬಾಂಗ್ಲಾದೇಶದ ಪ್ರಜೆಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಹಬೀಬುಲ್ಲಾ ಮಿಸ್ಬಾ (26), ಮತ್ತು ಅಹ್ಮದುಲ್ಲಾ (35) ಎಂದು ಗುರುತಿಸಲಾಗಿದೆ.

ಈ ಇಬ್ಬರು ಅಕ್ರಮ ದಾಖಲೆಗಳನ್ನು ಬಳಸಿಕೊಂಡು ಭಾರತದಲ್ಲಿ ನೆಲೆಸಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT