ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಖಾಲಿಸ್ತಾನಿ ಭಯೋತ್ಪಾದಕರ ವಿರುದ್ಧ ದೋಷಾರೋಪ

Published 21 ಮೇ 2024, 12:58 IST
Last Updated 21 ಮೇ 2024, 12:58 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪಂಜಾಬ್‌ ಮತ್ತು ದೆಹಲಿಯ ವಿವಿಧ ಭಾಗಗಳಲ್ಲಿ ಭಯೋತ್ಪಾದಕ ದಾಳಿ ನಡೆಸುವ ಸಂಚಿನ ಭಾಗವಾಗಿದ್ದಕ್ಕಾಗಿ ಕೆನಡಾ ಮೂಲದ ಖಾಲಿಸ್ತಾನಿ ಪರ ಭಯೋತ್ಪಾದಕ ಆರ್ಷದೀಪ್ ಸಿಂಗ್ ಮತ್ತು ಆತನ ಮೂವರು ಸಹಚರರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್ಐಎ) ದೋಷಾರೋಪ ಸಲ್ಲಿಸಿದೆ.

‘ಭಯೋತ್ಪಾದಕ ದಾಳಿಗಳನ್ನು ನಡೆಸಲು ಸಿಂಗ್ ನಿರ್ವಹಿಸುತ್ತಿದ್ದ ಸ್ಲೀಪರ್ ಸೆಲ್‌ಗಳನ್ನು ನಾಶಮಾಡುವಲ್ಲಿ ಯಶಸ್ಸು ಸಾಧಿಸಲಾಗಿದೆ’ ಎಂದು ಎನ್‌ಐಎ ಮಂಗಳವಾರ ಹೇಳಿದೆ.

‘ಕೆನಡಾ ಮೂಲದ ಆರ್ಷದೀಪ್ ಸಿಂಗ್ ಅಲಿಯಾಸ್ ಆರ್ಷ್ ದಾಲಾ ಮತ್ತು ಆತನ ಭಾರತೀಯ ಏಜೆಂಟರಾದ ಹರ್ಜೀತ್ ಸಿಂಗ್, ರವೀಂದರ್ ಸಿಂಗ್, ರಾಜೀವ್ ಕುಮಾರ್ ವಿರುದ್ಧ ನವದೆಹಲಿಯ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಸೋಮವಾರ ದೋಷಾರೋಪ ಸಲ್ಲಿಸಲಾಗಿದೆ’ ಎಂದು ಭಯೋತ್ಪಾದನಾ ವಿರೋಧಿ ಸಂಸ್ಥೆಯು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.

ಆರ್ಷ್‌ದೀಪ್ ಸೂಚನೆ ಮೇರೆಗೆ ಈ ಮೂವರು ಖಾಲಿಸ್ತಾನ್ ಟೈಗರ್ ಫೋರ್ಸ್ (ಕೆಟಿಎಫ್‌) ಭಯೋತ್ಪಾದನಾ–ದರೋಡೆಕೋರರ ಕೂಟವನ್ನು ಮುನ್ನಡೆಸುತ್ತಿದ್ದರು.

ಆರೋಪಿಗಳಾದ ಹರ್ಜೀತ್ ಸಿಂಗ್ ಹಾಗೂ ರವೀಂದರ್ ಸಿಂಗ್ ಸ್ಲೀಪರ್ ಸೆಲ್‌ಗಳಾಗಿ ಕಾರ್ಯನಿರ್ವಹಿಸುತ್ತಿದ್ದು, ರಾಜೀವ್ ಕುಮಾರ್‌ಗೆ ಆಶ್ರಯ ನೀಡಿದ್ದರು. ಈ ಮೂವರು ದಾಲಾ ನಿರ್ದೇಶನದ ಮೇರೆಗೆ ಸರಣಿ ಭಯೋತ್ಪಾದಕ ದಾಳಿ ನಡೆಸಲು ಯೋಜಿಸಿದ್ದರು. ಇದಕ್ಕಾಗಿ ಹಣವನ್ನು ಪಡೆದಿದ್ದರು ಎಂದು ಎನ್‌ಐಎ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT