ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೇಹ್‌: ಕಣಿವೆಗೆ ಉರುಳಿದ ವಾಹನ- 9 ಯೋಧರ ಸಾವು

Published 19 ಆಗಸ್ಟ್ 2023, 22:09 IST
Last Updated 19 ಆಗಸ್ಟ್ 2023, 22:09 IST
ಅಕ್ಷರ ಗಾತ್ರ

ಲೇಹ್‌: ಸೇನಾಯೋಧರು ಪ್ರಯಾಣಿಸುತ್ತಿದ್ದ ವಾಹನವು ಲಡಾಖ್‌ನ ಲೇಹ್‌ ಜಿಲ್ಲೆಯ ಕಿಯಾರಿಯಲ್ಲಿ ಶನಿವಾರ ಕಣಿವೆಗೆ ಉರುಳಿದ್ದು, 9 ಮಂದಿ ಯೋಧರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿದ ವಾಹನ ಸಂಜೆ 4.45ರ ವೇಳೆಗೆ ಆಳವಾದ ಕಣಿವೆಗೆ ಉರುಳಿದೆ. ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಪಿ.ಡಿ.ನಿತ್ಯಾ ಅವರು ತಿಳಿಸಿದ್ದಾರೆ.

ವಾಹನದಲ್ಲಿ 10 ಮಂದಿ ಯೋಧರಿದ್ದರು. ವಾಹನ ಲೇಹ್‌ನಿಂದ ನ್ಯೋಮಾಗೆ ತೆರಳುತ್ತಿತ್ತು. ತೀವ್ರವಾಗಿ ಗಾಯಗೊಂಡಿರುವ ಒಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT