ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಶನ್‌ ಇಲ್ಲದ ಸೀಟು ಕಂಡು ಶಾಕ್‌ ಆದ ಇಂಡಿಗೊ ಪ್ರಯಾಣಿಕ; ಆಕ್ರೋಶ

Published 27 ನವೆಂಬರ್ 2023, 9:56 IST
Last Updated 27 ನವೆಂಬರ್ 2023, 9:56 IST
ಅಕ್ಷರ ಗಾತ್ರ

ಪುಣೆ: ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುವ ಇಂಡಿಗೊ ವಿಮಾನಯಾನ ಸಂಸ್ಥೆ ಇದೀಗ ಮತ್ತೆ ಸುದ್ದಿಯ ಕೇಂದ್ರವಾಗಿದೆ. ಸಂಸ್ಥೆಗೆ ಸೇರಿದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರಿಗೆ ಕುಶನ್ ಇಲ್ಲದ ಸೀಟನ್ನು ನೀಡಿದ್ದು, ಸಂಸ್ಥೆಯ ನಿರ್ಲಕ್ಷ್ಯದ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ.

ಸುಬ್ರತ್‌ ಪಟ್ನಾಯಕ್ ಮತ್ತು ಅವರ ಪತ್ನಿ ಸಾಗರಿಕ ಪುಣೆಯಿಂದ ನಾಗಪುರಕ್ಕೆ ಪ್ರಯಾಣಿಸಲು 6ಇ 6798 ವಿಮಾನದಲ್ಲಿ ಟಿಕೆಟ್‌ ಕಾಯ್ದಿರಿಸಿದ್ದರು. ಭಾನುವಾರ ಪುಣೆಯಲ್ಲಿ ವಿಮಾನವೇರಿದ್ದ ದಂಪತಿ ಕುಶನ್‌ ಇಲ್ಲದ ಸೀಟು ಕಂಡು ಆಘಾತಗೊಂಡಿದ್ದರು.

‘ಕುಶನ್‌ ಇಲ್ಲದ ಸೀಟ್‌ನಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಸಿಬ್ಬಂದಿಗೆ ತಿಳಿಸಿದರು. ಕೆಳಗೆ ಬಿದ್ದಿರಬಹುದು ನೋಡಿ ಎಂದು ಹೇಳಿದ್ದಾರೆ. ಎಲ್ಲ ಕಡೆ ಹುಡುಕಿದ ಮೇಲೆಯೂ ಕುಶನ್ ಸಿಕ್ಕಿರಲಿಲ್ಲ. ಮತ್ತೆ ಸಿಬ್ಬಂದಿಗೆ ಮಾಹಿತಿ ನೀಡಿದ್ದೇವೆ. ಆ ವೇಳೆಯೂ ಸಿಬ್ಬಂದಿ ಸರಿಯಾಗಿ ಪ್ರತಿಕ್ರಿಯಿಸಿಲ್ಲ’ ಎಂದು ಸುಬ್ರತ್ ಪಟ್ನಾಯಕ್‌ ದೂರಿದ್ದಾರೆ.

ಈ ಕುರಿತಂತೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಸುಬ್ರತ್‌ ಪಟ್ನಾಯಕ್‌, ಕರುಣಾಜನಕ ಎಂದು ಬರೆದುಕೊಂಡಿದ್ದಾರೆ.

ಇಂಡಿಗೊ ಸಂಸ್ಥೆಯ ಅಸಮರ್ಪಕ ಸೇವೆ ಮತ್ತು ನಿರ್ಲಕ್ಷ್ಯ ಧೋರಣೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT