ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

YSR ತೆಲಂಗಾಣ ಪಕ್ಷ: ಕಾಂಗ್ರೆಸ್ ಜತೆ ವಿಲೀನ ಇಲ್ಲ– ಶರ್ಮಿಳಾ

Published 12 ಅಕ್ಟೋಬರ್ 2023, 13:40 IST
Last Updated 12 ಅಕ್ಟೋಬರ್ 2023, 13:40 IST
ಅಕ್ಷರ ಗಾತ್ರ

ಹೈದರಾಬಾದ್ (ಪಿಟಿಐ): ಕಾಂಗ್ರೆಸ್ ಜೊತೆ ವಿಲೀನ ಸಾಧ್ಯತೆಯನ್ನು ತಳ್ಳಿ ಹಾಕಿದ ವೈಎಸ್‌ಆರ್‌ ತೆಲಂಗಾಣ ಪಕ್ಷದ ಸ್ಥಾಪಕಿ ವೈ.ಎಸ್. ಶರ್ಮಿಳಾ, ರಾಜ್ಯ ವಿಧಾನಸಭೆಯ ಎಲ್ಲಾ 119 ಸ್ಥಾನಗಳಿಗೂ ಸ್ಪರ್ಧಿಸಲಾಗುವುದು ಎಂದು ಹೇಳಿದರು. 

ಗುರುವಾರ ಪಕ್ಷದ ಸಭೆಯಲ್ಲಿ ಮಾತನಾಡಿದ ಶರ್ಮಿಳಾ, ‘ಪಕ್ಷವನ್ನು ವಿಲೀನಗೊಳಿಸುವ ಅಥವಾ ಹಳೆಯ ಪಕ್ಷದೊಂದಿಗೆ ಕೆಲಸ ಮಾಡುವ ಪ್ರಸ್ತಾಪದ ಬಗ್ಗೆ ಕಾಂಗ್ರೆಸ್ ನಾಯಕರ ಪ್ರತಿಕ್ರಿಯೆಗಾಗಿ ನಾಲ್ಕು ತಿಂಗಳಿಂದ ಕಾಯುತ್ತಿದ್ದೆ. ಕಾಂಗ್ರೆಸ್‌ನಿಂದ ಯಾವುದೇ ಪ್ರತಿಕ್ರಿಯೆ ಬರದ ಕಾರಣ,  ಎಲ್ಲಾ ಕ್ಷೇತ್ರಗಳಲ್ಲಿ  ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

‘ಆಡಳಿತ ವಿರೋಧಿ ಮತಗಳು ವಿಭಜನೆಯಾಗದಂತೆ ನೋಡಿಕೊಳ್ಳಲು ಕಾಂಗ್ರೆಸ್ ಜತೆ ಹೋಗಲು ಬಯಸಿದ್ದೆವು. ಆಡಳಿತ ವಿರೋಧಿ ಮತಗಳು ವಿಭಜನೆಯಾದರೆ ಅದು ಅಂತಿಮವಾಗಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರಿಗೆ ಲಾಭವಾಗಲಿದೆ. ಆದರೆ, ಅದು (ಕಾಂಗ್ರೆಸ್ ಜೊತೆಗಿನ ಒಡನಾಟ) ಆಗಲಿಲ್ಲ ಎಂದರು. 

‘ಪಾಲೇರು ಕ್ಷೇತ್ರದಿಂದ ನಾನು ಸ್ಪರ್ಧಿಸುತ್ತೇನೆ. ಆದರೆ, ಮತ್ತೊಂದು ಕ್ಷೇತ್ರದಿಂದ ಸ್ಪರ್ಧಿಸುವಂತೆಯೂ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಅಲ್ಲದೇ ಪತಿ ಅನಿಲ್ ಕುಮಾರ್‌ ಮತ್ತು ತಾಯಿ ವಿಜಯಮ್ಮ ಸಹ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬ ಬೇಡಿಕೆ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT