ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅನರ್ಹ ಶಾಸಕರಿಗೆ ಪಿಂಚಣಿ ಇಲ್ಲ: ಮಸೂದೆಗೆ ಹಿಮಾಚಲ ಪ್ರದೇಶ ವಿಧಾನಸಭೆ ಒಪ್ಪಿಗೆ

Published : 5 ಸೆಪ್ಟೆಂಬರ್ 2024, 6:16 IST
Last Updated : 5 ಸೆಪ್ಟೆಂಬರ್ 2024, 6:16 IST
ಫಾಲೋ ಮಾಡಿ
Comments

ಶಿಮ್ಲಾ: ಸಂವಿಧಾನದ 10ನೇ ಪರಿಚ್ಛೇದಡಿ (ಪಕ್ಷಾಂತರ ವಿರೋಧಿ ಕಾಯ್ದೆ) ಅನರ್ಹಗೊಂಡ ಶಾಸಕರು ಪಿಂಚಣಿ ಪಡೆಯುವುನ್ನು ನಿರ್ಬಂಧಿಸುವ ಮಸೂದೆಗೆ ಹಿಮಾಚಲ ಪ್ರದೇಶ ವಿಧಾನಸಭೆ ಬುಧವಾರ ಒಪ್ಪಿಗೆ ನೀಡಿದೆ.

‘ಹಿಮಾಚಲ ಪ್ರದೇಶದ ವಿಧಾನಸಭೆ (ಸದಸ್ಯರ ಭತ್ಯೆ ಹಾಗೂ ಪಿಂಚಣಿ) ತಿದ್ದುಪಡಿ ಕಾಯ್ದೆ 2024’ಗೆ ವಿಧಾನಸಭೆ ಒಪ್ಪಿಗೆ ನೀಡಿದೆ. ಈ ವರ್ಷ ಫೆಬ್ರುವರಿಯಲ್ಲಿ ನಡೆದ ಬಜೆಟ್ ಮೇಲಿನ ಚರ್ಚೆಯಲ್ಲಿ ಗೈರು ಹಾಜರಾದ ಹಾಗೂ ವಿಪ್ ಉಲ್ಲಂಘಿಸಿದ ಆರು ಕಾಂಗ್ರೆಸ್ ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿದ್ದು, ಅವರ ಮೇಲೆ ಈ ಹೊಸ ಕಾನೂನಿನ ಪರಿಣಾಮ ಬೀರಲಿದೆ.

ಇಂಥ ಮಸೂದೆಗೆ ಒಪ್ಪಿಗೆ ನೀಡಿದ ದೇಶದ ಮೊದಲ ರಾಜ್ಯ ಎನ್ನುವ ಶ್ರೇಯ ಹಿಮಾಚ ಪ್ರದೇಶದ ಪಾಲಾಗಿದೆ.

ಈ ಮಸೂದೆಯನ್ನು ‘ರಾಜಕೀಯ ಸೇಡು‘ ತೀರಿಸಿಕೊಳ್ಳುವ ಕ್ರಮ ಎಂದು ವಿರೋಧ ಪಕ್ಷ ಬಿಜೆಪಿ ಹೇಳಿದೆ. ಅಲ್ಲದೆ ಈ ಹಿಂದಿನ ಘಟನೆಗಳಿಗೆ ಇದು ಅನ್ವಯವಾಗದು ಎಂದಿದೆ.

‘ಸಂವಿಧಾನದ 10ನೇ ‍‍ಪರಿಚ್ಚೇದದಡಿ ಯಾವುದೇ ಸಮಯದಲ್ಲಿ ವ್ಯಕ್ತಿಯು ಅನರ್ಹಗೊಂಡಿದ್ದರೆ ಪಿಂಚಣಿಗೆ ಅರ್ಹರಾಗಿರುವುದಿಲ್ಲ’ ಎಂದು ಮಸೂದೆಯಲ್ಲಿ ಹೇಳಲಾಗಿದೆ.

ಮಸೂದೆಗೆ ರಾಜ್ಯಪಾಲರ ಸಹಿ ಬಿದ್ದರೆ ಅಧಿಕೃತ ಕಾನೂನು ಆಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT