ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಕ್ಷ ಸೇರ್ಪಡೆ ಬಗ್ಗೆ ಚಂಪೈ ನಮ್ಮೊಂದಿಗೆ ಮಾತನಾಡಿಲ್ಲ: BJP ರಾಜ್ಯಾಧ್ಯಕ್ಷ

Published 19 ಆಗಸ್ಟ್ 2024, 15:36 IST
Last Updated 19 ಆಗಸ್ಟ್ 2024, 15:36 IST
ಅಕ್ಷರ ಗಾತ್ರ

ರಾಂಚಿ: ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್‌ ಅವರು ಬಿಜೆಪಿ ಸೇರುವ ಬಗ್ಗೆ, ನಮ್ಮೊಂದಿಗೆ ಯಾವುದೇ ಮಾತುಕತೆ ನಡೆಸಿಲ್ಲ ಎಂದು ಜಾರ್ಖಂಡ್‌ನ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಾಬುಲಾಲ್‌ ಮರಾಂಡಿ ತಿಳಿಸಿದರು.

ಚಂಪೈ ಅನುಭವಿ ರಾಜಕಾರಣಿ. ಪ್ರತ್ಯೇಕ ಜಾರ್ಖಂಡ್‌ ಚಳವಳಿಯ ಭಾಗವಾಗಿದ್ದ ಅವರು ತಮ್ಮದೇ ಆದ ಮಾರ್ಗವನ್ನು ನಿರ್ಧರಿಸಲಿದ್ದಾರೆ ಎಂದು ಹೇಳಿದರು.

ಬಿಜೆಪಿಗೆ ಸೇರ್ಪಡೆಯಾಗುವ ಊಹಾಪೋಹಗಳ ನಡುವೆಯೇ ಸೊರೇನ್ ಭಾನುವಾರ ಮಧ್ಯಾಹ್ನ ನವದೆಹಲಿಗೆ ತೆರಳಿದ್ದಾರೆ. ಇದಾದ ಬಳಿಕ  ‘ಮುಖ್ಯಮಂತ್ರಿಯಾಗಿದ್ದಾಗ ಅಪಮಾನ ಅನುಭವಿಸಿದೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದರು. ಇದು ಚರ್ಚೆಗೆ ಕಾರಣವಾಗಿತ್ತು.

‘ಮುಖ್ಯಮಂತ್ರಿ ಹುದ್ದೆಯಿಂದ ಚಂಪೈ ಅವರನ್ನು ತೆಗೆದ ರೀತಿ ಅಪಮಾನಕಾರಿಯಾದುದು. ಅವರನ್ನು ನೋಯಿಸಲಾಗಿದೆ’ ಎಂಬುದನ್ನು ಸೊರೇನ್‌ ಅವರ ಸಂದೇಶವು ತಿಳಿಸುತ್ತದೆ ಎಂದು ಮರಾಂಡಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT