ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಾದಾತ್ಮಕ ಯೂಟ್ಯೂಬರ್‌ ಎಲ್ವಿಶ್‌ಗೆ ಜಾಮೀನು ಮಂಜೂರು

ಪಾರ್ಟಿಗಳಲ್ಲಿ ಡ್ರಗ್ಸ್‌ಗೆ ಹಾವಿನ ವಿಷ ಬಳಕೆ ಆರೋಪ
Published 23 ಮಾರ್ಚ್ 2024, 3:21 IST
Last Updated 23 ಮಾರ್ಚ್ 2024, 3:21 IST
ಅಕ್ಷರ ಗಾತ್ರ

ನೊಯಿಡಾ: ಹಾವಿನ ವಿಷವನ್ನು ಮಾದಕ ವಸ್ತುವನ್ನಾಗಿ ಬಳಕೆ ಮಾಡಿದ ಆರೋಪದ ಮೇಲೆ ಬಂಧಿತನಾಗಿದ್ದ ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್‌ ಯಾದವ್‌ ಅಲಿಯಾಸ್ ಸಿದ್ಧಾರ್ಥ್‌ ಯಾದವ್‌ಗೆ ನೊಯಿಡಾದ ಗೌತಮ ಬುದ್ಧ ನಗರ ನ್ಯಾಯಾಲಯವು ಶುಕ್ರವಾರ ಜಾಮೀನು ನೀಡಿದೆ. 

ಎಲ್ವಿಶ್‌ ತಾನು ಆಯೋಜಿಸುತ್ತಿದ್ದ ಪಾರ್ಟಿಗಳಲ್ಲಿ ಹಾವಿನ ವಿಷವನ್ನು ಮಾದಕ ವಸ್ತುವನ್ನಾಗಿ ಬಳಸುತ್ತಿದ್ದ ಆರೋಪದ ಮೇಲೆ ಕಳೆದ ಭಾನುವಾರ ನೊಯಿಡಾ ಪೊಲೀಸರು ಆತನನ್ನು ಬಂಧಿಸಿದ್ದರು. ಎಲ್ವಿಶ್‌ನ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ತಲಾ ₹50,000ಗಳ ಎರಡು ಬಾಂಡ್‌ ಆಧಾರದ ಮೇಲೆ ಜಾಮೀನು ಮಂಜೂರು ಮಾಡಿದೆ. 

ಸದ್ಯ ನೊಯಿಡಾದ ಲಕ್ಸರ್‌ ಜೈಲಿನಲ್ಲಿರುವ ಎಲ್ವಿಶ್‌ ಜೈಲಿನಿಂದ ಹೊರಬರಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ನಾವು ಕಾನೂನು ಪ್ರಕ್ರಿಯೆಯನ್ನು ಆರಂಭಿಸಿದ್ದೇವೆ. ಜಾಮೀನು ಬಾಂಡ್‌ಗಳ ತಾತ್ಕಾಲಿಕ ಸ್ವೀಕಾರಕ್ಕಾಗಿ ಅರ್ಜಿ ಸಲ್ಲಿಸಿದ್ದೇವೆ. ಇದರಿಂದ ಬಿಡುಗಡೆ ಆದೇಶ ಶೀಘ್ರವಾಗುತ್ತದೆ. ಶುಕ್ರವಾರ ರಾತ್ರಿ ಅಥವಾ ಕೆಲ ದಿನಗಳ ಬಳಿಕ ಬಿಡುಗಡೆ ಆದೇಶ ನೀಡಬಹುದು. ಶನಿವಾರದಿಂದ ಹೋಳಿ ರಜೆಗಾಗಿ ನ್ಯಾಯಾಲಯ ಬಂದ್ ಆಗುವುದು ಎಂದು ಎಲ್ವಿಶ್‌ ‍ಪರ ವಕೀಲ ಪ್ರಶಾಂತ್‌ ರಾಠಿ ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT