ನೋಯ್ಡಾ: ಅಕ್ಟೋಬರ್ 30 ರಂದು ನೋಯ್ಡಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆಗೊಳ್ಳಲಿದ್ದು, ಅದಾಗಿ 45 ದಿನಗಳ ಬಳಿಕ ವಿಮಾನಗಳ ಕಾರ್ಯಾಚರಣೆ ಆರಂಭವಾಗಲಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕಿಂಜರಪು ರಾಮ್ ಮೋಹನ್ ನಾಯ್ಡು ಹೇಳಿದ್ದಾರೆ.
.ರಾಯಚೂರು | ವಿಮಾನ ನಿಲ್ದಾಣ ಕಾಮಗಾರಿ ತ್ವರಿತಗೊಳಿಸಿ: ಜಿಲ್ಲಾಧಿಕಾರಿ ನಿತೀಶ್.
ಹೊಸದಾಗಿ ನಿರ್ಮಿಸಲಾದ ಈ ವಿಮಾನ ನಿಲ್ದಾಣವು ಉತ್ತರ ಪ್ರದೇಶದ ಗೌತಮ ಬುದ್ಧ ನಗರದ ಜೆವಾರ್ ಪ್ರದೇಶದಲ್ಲಿದೆ. ದೆಹಲಿಗಿಂತ 75 ಕಿ.ಮೀ ದೂರದಲ್ಲಿದೆ. ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬಳಿಕ ರಾಷ್ಟ್ರ ರಾಜಧಾನಿ ವಲಯದಲ್ಲಿ ನಿರ್ಮಾಣವಾದ ಎರಡನೇ ವಿಮಾನ ನಿಲ್ದಾಣ ಇದಾಗಿದೆ.

‘ನಾವು ಈಗ ಉದ್ಘಾಟನೆ ಮಾಡಲು ನಿರ್ಧರಿಸಿದ್ದೇವೆ. ಶೀಘ್ರವೇ ಆದು ನಡೆಯಲಿದೆ. ಸದ್ಯ ಅಕ್ಟೋಬರ್ 30ಕ್ಕೆ ಉದ್ಘಾಟನೆ ಮಾಡುವುದಾಗಿ ನಿಶ್ಚಯವಾಗಿದೆ. ಅದಾಗಿ 45 ದಿನಗಳ ಬಳಿಕ ಕಾರ್ಯಾಚರಣೆಯೂ ಆರಂಭವಾಗಲಿದೆ’ ಎಂದು ಪಕ್ಕದ ಗಾಜಿಯಾಬಾದ್ ಜಿಲ್ಲೆಯ ಹಿಂಡನ್ ವಿಮಾನ ನಿಲ್ದಾಣದಲ್ಲಿ ಅವರು ಮಾಹಿತಿ ನೀಡಿದರು.
.ಎರಡನೇ ವಿಮಾನ ನಿಲ್ದಾಣ ಸ್ಥಳ ಆಖೈರು: ಕೇಂದ್ರಕ್ಕೆ ಒತ್ತಡ.
‘ಜೆವಾರ್ ವಿಮಾನ ನಿಲ್ದಾಣದಿಂದ ಕಾರ್ಯಾಚರಣೆ ನಡೆಸಲು ವಿಮಾನಯಾನ ಕಂಪನಿಗಳು ಉತ್ಸಾಹ ತೋರಿವೆ. ಈ ಪ್ರದೇಶದಲ್ಲಿ ಅದ್ಭುತ ಸಾಮರ್ಥ್ಯ ಇದೆ ಎಂದು ಅವರಿಗೆ ತಿಳಿದಿದೆ. ವಿಮಾನಯಾನ ಕಂಪನಿಗಳಲ್ಲಿ ನಡೆಯುತ್ತಿರುವ ಮಾತುಕತೆಗಳು ಗಮನಿಸಿದರೆ ಮೊದಲ ಹಂತದಲ್ಲಿ ಜೆವಾರ್ ವಿಮಾನ ನಿಲ್ದಾಣದಿಂದ ಕನಿಷ್ಠ 10 ನಗರಗಳಿಗೆ ಸಂಪರ್ಕ ಸಾಧ್ಯವಾಗಬಹುದು’ ಎಂದು ಹೇಳಿದ್ದಾರೆ.

ಪ್ರತಾಣಿಕರಿಗಿಂತ ಕಾರ್ಗೊ ಕಾರ್ಯಾಚರಣೆಗೆ ಹೆಚ್ಚಿನ ಒತ್ತು ನೀಡುವುದರಿಂದ ಈ ಏರ್ಪೋರ್ಟ್ ಹೆಚ್ಚಿನ ಮಹತ್ವ ಹೊಂದಿದೆ ಎಂದು ಅವರು ಹೇಳಿದ್ದಾರೆ. ಈ ನಿಲ್ದಾಣವನ್ನು ಉತ್ತರ ಪ್ರದೇಶ ಸರ್ಕಾರ ಖಾಸಗಿ–ಸಾರ್ವಜನಿಕ ಸಹಭಾಗಿತ್ವದಡಿ ನಿರ್ಮಾಣ ಮಾಡಿದೆ.
.ಕೊಪ್ಪಳದಲ್ಲಿ ವಿಮಾನ ನಿಲ್ದಾಣ: ಗಗನಕುಸುಮವಾದ ಗಗನಯಾನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.