2026ರ ಹೊಸ ವರ್ಷ ಆರಂಭವಾಗಿದೆ. ಈ ವರ್ಷದ ಭವಿಷ್ಯ ಹೇಗಿರಲಿದೆ ಎಂಬುದರ ಕುರಿತು ಬಾಬಾ ವಂಗಾ ಸೇರಿದಂತೆ ವಿವಿಧ ಭವಿಷ್ಯಕಾರರ ಭವಿಷ್ಯಗಳನ್ನು ಅವರ ಅನುಯಾಯಿಗಳು ಬಿಡುಗಡೆ ಮಾಡುತ್ತಿದ್ದಾರೆ. ಸದ್ಯ, ನಾಸ್ಟ್ರಾಡಾಮಸ್ ಅನುಯಾಯಿಗಳು ಈ ವರ್ಷ ಜಾಗತಿಕವಾಗಿ ಸಂಭವಿಸಬಹುದಾದ ಘಟನೆಗಳ ಕುರಿತಾದ ಭವಿಷ್ಯವನ್ನು ಬಿಡುಗಡೆ ಮಾಡಿದ್ದಾರೆ.

ನಾಸ್ಟ್ರಾಡಾಮಸ್ ಒಬ್ಬ ಫ್ರೆಂಚ್ ಜ್ಯೋತಿಷಿ ಮತ್ತು ವೈದ್ಯರಾಗಿದ್ದರು. 1500ರ ದಶಕದಲ್ಲಿ ಜೀವಿಸಿದ್ದ ಅವರು, ಅಡಾಲ್ಫ್ ಹಿಟ್ಲರ್ ಅಧಿಕಾರಕ್ಕೆ ಬಂದಿದ್ದು, ಸೆಪ್ಟೆಂಬರ್ 11ರ ಮುಂಬೈ ದಾಳಿ ಸೇರಿದಂತೆ ಕೋವಿಡ್ 19 ರಂತಹ ಸಾಂಕ್ರಾಮಿಕ ರೋಗಗಳ ಸಂಭವದ ಬಗ್ಗೆ ಮೊದಲೇ ಹೇಳಿದ್ದರು.
.ವರ್ಷ ಭವಿಷ್ಯ 2026: ಈ ವರ್ಷ ಯಾವ ರಾಶಿಗೆ ಏನೇನು ಫಲ? ಇಲ್ಲಿದೆ ಮುನ್ನೋಟ.
2026 ರ ನಾಸ್ಟ್ರಾಡಾಮಸ್ ಭವಿಷ್ಯವಾಣಿ

ವಿಶ್ವದ ಜನಪ್ರಿಯ ವ್ಯಕ್ತಿಯ ಸಾವು

ನಾಸ್ಟ್ರಾಡಾಮಸ್ ಅವರು ಸ್ಪಷ್ಟವಾಗಿ ಬರೆಯದಿದ್ದರೂ ಕೂಡ ಅವರ ಅಸ್ಪಷ್ಟ ಬರಹಗಳ ಪ್ರಕಾರ, ವಿಶ್ವದ ಜನಪ್ರಿಯ ನಾಯಕ ಅಥವಾ ವ್ಯಕ್ತಿ ಸಿಡಿಲು ಬಡಿದು ಸಾಯಬಹುದು ಎಂದು ಭವಿಷ್ಯ ನುಡಿದಿದ್ದಾರೆ.

ರಕ್ತಪಾತ ಸಾಧ್ಯತೆ

‘ಸ್ವಿಸ್ ಪ್ರದೇಶವಾದ ಟಿಸಿನೊ ರಕ್ತದಿಂದ ತುಂಬಿ ತುಳುಕುತ್ತದೆ’ ಎಂದು ನಾಸ್ಟ್ರಾಡಾಮಸ್ನ ಪದ್ಯದಲ್ಲಿ ಹೇಳಿದ್ದಾರೆ. ಟಿಸಿನೊ ಪ್ರದೇಶ ದಕ್ಷಿಣ ಸ್ವಿಟ್ಜರ್ಲ್ಯಾಂಡ್ನಲ್ಲಿದೆ. ಈ ನಗರ ಸರೋವರಗಳು ಮತ್ತು ಹಿಮನದಿಗಳಿಗೆ ಹೆಸರುವಾಸಿ. ಆದರೆ ಕಾಕತಾಳೀಯ ಎಂಬಂತೆ 2026ರ ಜನವರಿ 1ರಂದು ಸ್ವಿಟ್ಜರ್ಲ್ಯಾಂಡ್ನ ಟಿಸಿನೊದಿಂದ ಸುಮಾರು 167 ಕಿಮೀ ದೂರದಲ್ಲಿರುವ ಕ್ರಾನ್ಸ್ ಮೊಂಟಾನಾದ ಸ್ಕೀ ರೆಸಾರ್ಟ್ ಎಂಬಲ್ಲಿ ಬೆಂಕಿ ಅವಘಢ ಸಂಭವಿಸಿದೆ. ಇದರ ಪರಿಣಾಮ 40ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಜನರು ಗಾಯಗೊಂಡಿರುವುದಾಗಿ ವರದಿಯಾಗಿದೆ.

7 ತಿಂಗಳ ಮಹಾಯುದ್ಧ:

‘7 ತಿಂಗಳುಗಳ ಕಾಲ ಮಹಾಯುದ್ಧದಲ್ಲಿ ಜನರು ದುಷ್ಟತನದಿಂದ ಸತ್ತರು. ರೂಯೆನ್, ಎವ್ರೂ ರಾಜ ವಿಫಲನಾಗುವುದಿಲ್ಲ‘ ಎಂದು ನಾಸ್ಟ್ರಾಡಾಮಸ್ನ ಭವಿಷ್ಯ ಹೇಳುತ್ತದೆ. ಅಂದರೆ ವಿಶ್ವದಲ್ಲಿ 7 ತಿಂಗಳ ಕಾಲ ಇಬ್ಬರು ನಾಯಕರ ನಡುವೆ ಮಹಾಯದ್ದ ನಡೆಯಲಿದ್ದು, ಸೈನಿಕರು ಸತ್ತರು ನಾಯಕರು ಗೆಲ್ಲುತ್ತಾರೆ ಎಂಬುದು ಒಳ ಅರ್ಥವಾಗಿದೆ.

ನೌಕೆಗಳ ಮುಖಾಮುಖಿ:

ನಾಸ್ಟ್ರಾಡಾಮಸ್ನ ಬರಹಗಳಲ್ಲಿ ಇರುವಂತೆ ಈ ವರ್ಷ ’ಏಳು ಹಡಗುಗಳ ಸುತ್ತಲಿನ ಮಾರಣಾಂತಿಕ ಯುದ್ಧ‘ ಎಂದು ಹೇಳಿದ್ದಾರೆ. ಇದು ದಕ್ಷಿಣ ಚೀನಾ ಸಮುದ್ರದಲ್ಲಿ ನಡೆಯುವ ಪ್ರಾದೇಶಿಕ ಯುದ್ಧ ಎಂಬ ನಂಬಿಕೆ ಇದೆ. ಇಲ್ಲಿ ಪ್ರಮುಖವಾಗಿ ಚೀನಾ, ತೈವಾನ್, ವಿಯೆಟ್ನಾಂ, ಮಲೇಷಿಯ, ಬ್ರೂನಿ, ಇಂಡೋನೇಷ್ಯಾ ಮತ್ತು ಫಿಲಿಪೈನ್ಸ್ 7 ಹಡಗುಗಳು ಯುದ್ದ ನಡೆಸಲಿವೆ ಎಂದು ಅವರ ಅನುಯಾಯಿಗಳು ಭವಿಷ್ಯ ನುಡಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.