ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಾಠಿಯ ಹೆಸರಾಂತ ಹಿರಿಯ ಕವಿ ನಾ. ದೋ. ಮಹಾನೋರ್‌ ನಿಧನ

Published 3 ಆಗಸ್ಟ್ 2023, 13:01 IST
Last Updated 3 ಆಗಸ್ಟ್ 2023, 13:01 IST
ಅಕ್ಷರ ಗಾತ್ರ

ಪುಣೆ : ಮರಾಠಿಯ ಹೆಸರಾಂತ ಕವಿ, ಸಾಹಿತಿ ನಾಮದೇವ್‌ ಧೋಂಡೊ ಮಹಾನೋರ್‌ ಗುರುವಾರ ಬೆಳಿಗ್ಗೆ ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು. 

ವಯೋಸಹಜ ಕಾರಣಗಳಿಂದ ಅವರು ನಿಧನರಾದರು ಎಂದು ಅವರ ಕುಟುಂಬದವರು ಹೇಳಿದ್ದಾರೆ. ಪುಣೆಯ ಆಸ್ಪತ್ರೆಯೊಂದರಲ್ಲಿ ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಒದಗಿಸಲಾಗಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.

ನಾ. ದೋ. ಮಹಾನೋರ್‌ ಎಂದೇ ಖ್ಯಾತರಾಗಿರುವ ಅವರು, ಹಲವು ಕವನ ಸಂಕಲನಗಳು ಸೇರಿದಂತೆ ಮರಾಠಿ ಸಿನಿಮಾಗಳಿಗೆ ಗೀತೆಗಳನ್ನು ಬರೆದಿದ್ದಾರೆ.

‘ಜಗಾಲ ಪ್ರೇಮ್‌ ಅರ್ಪಾವೆ’, ‘ಗಂಗಾ ವಾಹು ದೆ ನಿರ್ಮಲ್’ ಅವರ ಜನಪ್ರಿಯ ಕವಿತೆಗಳು. ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ಮಹಾರಾಷ್ಟ್ರ ಸರ್ಕಾರದ ಕೃಷಿ ಭೂಷಣ ಪ್ರಶಸ್ತಿಯನ್ನು ಪಡೆದಿದ್ದಾರೆ.  

ಮಹಾರಾಷ್ಟ್ರ ವಿಧಾನ ಪರಿಷತ್‌ನ ಸದಸ್ಯರೂ ಆಗಿದ್ದ ಮಹಾನೋರ್‌ ನಿಧನಕ್ಕೆ ಮುಖ್ಯಮಂತ್ರಿ ಶಿಂಧೆ, ಉಪಮುಖ್ಯಮಂತ್ರಿ ಫಡಣವೀಸ್‌ ಅವರು ಸಂತಾಪ ಸೂಚಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT