ಲಖನೌ: ಮಹಾಕುಂಭ ಮೇಳದಲ್ಲಿ ಭಾಗವಹಿಸಿ, ಹತ್ತಿರದಿಂದ ನೋಡಿದವರಿಗೆ ಮಾತ್ರ ಅದರ ನಿಜವಾದ ಮಹತ್ವ ಅರಿವಾಗಲಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬುಧವಾರ ತಿಳಿಸಿದ್ದಾರೆ.

ವಿಧಾನ ಪರಿಷತ್ತಿನಲ್ಲಿ ಮಾತನಾಡಿದ ಅವರು, ಮಹಾಕುಂಭ ಮೇಳ ಸಮಯದಲ್ಲಿ ಅನೇಕ ಜನರು, ಪಕ್ಷಗಳು, ಸಂಸ್ಥೆಗಳು ಆಧಾರರಹಿತ ಹೇಳಿಕೆಗಳನ್ನು ನೀಡಿದ್ದವು. ಆದರೆ ಅಂತಹ ಹೇಳಿಕೆಗಳಿಂದ ನಾವು ವಿಚಲಿತರಾಗಲಿಲ್ಲ. ನಾವು ಭವ್ಯ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದೇವೆ ಎಂದು ಆದಿತ್ಯನಾಥ್ ಹೇಳಿದ್ದಾರೆ.
.ನಿವೃತ್ತಿ ಘೋಷಿಸಿದ ಟೇಬಲ್ ಟೆನಿಸ್ ದಂತಕಥೆ ಅಚಂತ ಶರತ್ ಕಮಲ್.ಅಧಿಕ ಸುಂಕ: ಅಮೆರಿಕ ವಿರುದ್ಧ WTOನಲ್ಲಿ ದೂರು ದಾಖಲಿಸಿದ ಕೆನಡಾ.
‘ಭಗವದ್ಗೀತೆಯನ್ನು ಉಲ್ಲೇಖಿಸಿದ ಆದಿತ್ಯನಾಥ್, ಭಗವಾನ್ ಕೃಷ್ಣನು ಪ್ರತಿಯೊಬ್ಬ ವ್ಯಕ್ತಿಯೂ ತನ್ನನ್ನು ಹೇಗೆ ನೆನಪಿಸಿಕೊಳ್ಳಬೇಕೆಂದು ಹೇಳುತ್ತಾನೆ. ಅದೇ ರೀತಿ ಕುಂಭಮೇಳದ ಬಗ್ಗೆ ಜನರು ಯಾವ ದೃಷ್ಟಿಕೋನದಿಂದ ನೋಡುತ್ತಾರೆ ಎಂಬುದು ಮುಖ್ಯವಾಗುತ್ತದೆ ಎಂದು ಆದಿತ್ಯನಾಥ್ ತಿಳಿಸಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಕ್ತ ಸಂವಾದದ ಮಹತ್ವವನ್ನು ಒತ್ತಿ ಹೇಳಿದ ಆದಿತ್ಯನಾಥ್, ಸದಸ್ಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಾಗ ಸದನದ ಸಭ್ಯತೆಯನ್ನು ಕಾಪಾಡಿಕೊಳ್ಳಬೇಕೆಂದು ಒತ್ತಾಯಿಸಿದರು .

ಇತ್ತೀಚೆಗೆ ಪ್ರಯಾಗ್ರಾಜ್ನಲ್ಲಿ 45 ದಿನಗಳ ಮಹಾಕುಂಭ ಮೇಳವು ಆಧ್ಯಾತ್ಮಿಕ, ಸಾಮಾಜಿಕ ಮತ್ತು ಆರ್ಥಿಕ ಪರಿಣಾಮದ ಸಂಕೇತವಾಗಿದೆ ಎಂದು ಆದಿತ್ಯನಾಥ್ ತಿಳಿಸಿದ್ದಾರೆ.
.ಇಲ್ಲಿಯವರೆಗೆ ಪರಿಪೂರ್ಣವಾದ ಆಟವನ್ನು ಆಡಿಲ್ಲ, ಫೈನಲ್ನಲ್ಲಿ ನಿರೀಕ್ಷೆ: ಗಂಭೀರ್.ಹಿಂದಿ ವಿರುದ್ಧ ಪ್ರತಿಜ್ಞೆ ಮಾಡುವಾಗ ಮಹಿಳೆಯ ಬಳೆ ಕದಿಯಲು ಯತ್ನಿಸಿದ DMK ನಾಯಕ?.ಮಣಿಪುರದಲ್ಲಿ 2 ಬಾರಿ ಕಂಪಿಸಿದ ಭೂಮಿ: ಹಲವು ಕಟ್ಟಡಗಳಲ್ಲಿ ಬಿರುಕು!.ನನ್ನ ಮಗ ನಕಾರಾತ್ಮಕ ಸ್ವಜನಪಕ್ಷಪಾತದ ಬಲಿಪಶು: ಅಮಿತಾಭ್ ಬಚ್ಚನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.