ಗಂಡೈಕೊಂಡ ಚೋಳಪುರಂ: ‘ಭಾರತದ ಭದ್ರತೆ ಮತ್ತು ಸಾರ್ವಭೌಮತ್ವದ ಮೇಲೆ ದಾಳಿ ನಡೆಸಿದಲ್ಲಿ ದೇಶದ ಪ್ರತ್ಯುತ್ತರ ಹೇಗಿರುತ್ತದೆ ಎಂಬುದನ್ನು ‘ಆಪರೇಷನ್ ಸಿಂಧೂರ’ದ ಮೂಲಕ ಜಗತ್ತಿಗೆ ತೋರಿಸಿದ್ದೇವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಎರಡು ದಿನ ತಮಿಳುನಾಡು ಪ್ರವಾಸ ಆರಂಭಿಸಿರುವ ನರೇಂದ್ರ ಮೋದಿ ಅವರು, ಚೋಳ ಸಾಮ್ರಾಜ್ಯದ ರಾಜ ರಾಜೇಂದ್ರ ಚೋಳ–1 ಅವರ ಜನ್ಮದಿನದ ಗೌರವಾರ್ಥವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತವನ್ನು ಗುರಿಯಾಗಿಸಿ ದಾಳಿ ನಡೆಸಿ ಸುರಕ್ಷಿತವಾಗಿ ಅಡಗಿ ಕೂರುವ ಜಾಗ ಈ ಭೂಮಿಯ ಮೇಲೆಯೇ ಇಲ್ಲ ಎಂಬುದನ್ನು ಈ ಕಾರ್ಯಾಚರಣೆಯು ಸಾಬೀತುಪಡಿಸಿದೆ ಎಂದರು.
.ಆಪರೇಷನ್ ಸಿಂಧೂರ ಮುಂದುವರಿದಿದೆ, ಮಿಲಿಟರಿ ಸದಾ ಸನ್ನದ್ಧವಾಗಿರಬೇಕು: ಸಿಡಿಎಸ್.
‘ಆಪರೇಷನ್ ಸಿಂಧೂರ ಕಾರ್ಯಾಚರಣೆಯು ದೇಶದಾದ್ಯಂತ ಹೊಸ ಆತ್ಮವಿಶ್ವಾಸವನ್ನು ನೀಡಿದೆ. ಇದರಿಂದ ಭಾರತದ ಸಾಮರ್ಥ್ಯವು ಜಗತ್ತಿನ ಎದುರು ಅನಾವರಣಗೊಂಡಿದೆ’ ಎಂದು ಅಭಿಪ್ರಾಯಪಟ್ಟರು.

ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಾ ಹಲವರು ಬ್ರಿಟನ್ನಿನ ‘ಮ್ಯಾಗ್ನಾ ಕಾರ್ಟಾ’ ವ್ಯವಸ್ಥೆಯನ್ನು ನೆನೆಯುತ್ತಾರೆ. ಆದರೆ ಚೋಳದ ಕಾಲದ ಕುದವೋಳೈ ವ್ಯವಸ್ಥೆಯು ‘ಮ್ಯಾಗ್ನಾ ಕಾರ್ಟಾ’ ವ್ಯವಸ್ಥೆಗೂ ಹಳೆಯದಾದದ್ದು ಎಂದು ಹೇಳಿದರು.

ಕುದವೋಳೈ ಎಂಬುದು ಚೋಳರ ಕಾಲ ಚುನಾವಣಾ ವ್ಯವಸ್ಥೆ.
.Operation Sindoor | ಭಯೋತ್ಪಾದನೆ ವಿರುದ್ಧದ ಭಾರತದ ಕಠಿಣ ನಿಲುವು ಸಾಬೀತು: ಮೋದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.