ನವದೆಹಲಿ: ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ 9 ಯುದ್ಧ ವಿಮಾನಗಳು, ಹತ್ತಕ್ಕೂ ಹೆಚ್ಚು ಆತ್ಮಹತ್ಯಾ ಡ್ರೋನ್ ಹಾಗೂ ಕ್ಷಿಪಣಿಗಳನ್ನು ಭಾರತೀಯ ಸೇನಾ ಪಡೆ ಹೊಡೆದು ಹಾಕಿದೆ ಎಂದು ವರದಿಯಾಗಿದೆ.

ಈ ಮೂಲಕ ಪಾಕಿಸ್ತಾನ ಭಾರಿ ಮಿಲಿಟರಿ ನಷ್ಟ ಅನುಭವಿಸಿದೆ ಎಂದು ಪಾಕಿಸ್ತಾನ ರಕ್ಷಣಾ ಇಲಾಖೆ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.

ಸಿಂಧೂರ ಕಾರ್ಯಾಚರಣೆಯ ವೇಳೆ 6 ಯುದ್ಧ ವಿಮಾನಗಳನ್ನು ಆಕಾಶದಲ್ಲೇ ಹೊಡೆದುರುಳಿಸಲಾಗಿದೆ. ಪಾಕಿಸ್ತಾನದ ವಾಯು ನೆಲೆಯಲ್ಲಿದ್ದ ಎರಡು ಇತರೆ ವಿಮಾನಗಳು ಹಾಗೂ ಸಿ-130 ಸಾರಿಗೆ ವಿಮಾನವನ್ನು ಹೊಡೆದು ಹಾಕಲಾಗಿದೆ ಎಂದು ಭಾರತೀಯ ವಾಯುಪಡೆ ನೀಡಿದ ದತ್ತಾಂಶಗಳ ತಾಂತ್ರಿಕ ವಿಶ್ಲೇಷಣೆಯಲ್ಲಿ ತಿಳಿದುಬಂದಿದೆ.

ಭಾರತದ ವಾಯು ರಕ್ಷಣಾ ವ್ಯವಸ್ಥೆಯಾದ ಸುದರ್ಶನ್, ವಿಮಾನಗಳನ್ನು 300 ಕಿಮೀ ದೂರದಲ್ಲಿ ಹೊಡೆದು ಹಾಕಿದೆ. ಭಾರತದ ಕಡೆ ಬರುತ್ತಿದ್ದ ಡ್ರೋನ್ಗಳು ಮತ್ತು ಕ್ರಿಪಣಿಗಳನ್ನು ಭಾರತ ಹೊಡೆದುರುಳಿಸಿದೆ. ಆದರೆ ಪಾಕಿಸ್ತಾನ ನಾಶವಾಗಿರುವ ವಿಮಾನಗಳು, ಕ್ಷಿಪಣಿಗಳು ಮತ್ತು ಡ್ರೋನ್ಗಳ ಅವಶೇಷಗಳನ್ನು ಪಾಕಿಸ್ತಾನ ಹೊರತೆಗೆಯುತ್ತಿಲ್ಲ ಎಂದು ವರದಿಯಾಗಿದೆ.

ಆದಾಗ್ಯೂ ಪಾಕಿಸ್ತಾನ ತನ್ನ ಮಿಲಿಟರಿ ನಾಶದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.