ನವದೆಹಲಿ: 'ಶಾಂತಿ' ಎನ್ನುವುದು ಕೇವಲ ಭ್ರಮೆ ಮಾತ್ರವೇ. ಏಕೆಂದರೆ ಭಾರತವು ಶಾಂತಿಯನ್ನು ಪರಿಪಾಲನೆ ಮಾಡಿದರೂ ಅನಿಶ್ಚಿತತೆಯ ಸಮಯದಲ್ಲಿ ಎಲ್ಲದಕ್ಕೂ ಸಿದ್ಧವಾಗಿರಬೇಕು ಎಂದ ರಕ್ಷಣಾ ಸಚಿವ ರಾಜನಾಥ ಸಿಂಗ್, ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಸಶಸ್ತ್ರ ಪಡೆಗಳು ಪ್ರದರ್ಶಿಸಿದ ಶೌರ್ಯವನ್ನು ಶ್ಲಾಘಿಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ದೇಶಿಯವಾಗಿ ನಿರ್ಮಿಸಲಾದ ಉಪಕರಣಗಳ ಕಾರ್ಯಕ್ಷಮತೆಯಿಂದಾಗಿ ಭಾರತ ನಿರ್ಮಿತ ಮಿಲಿಟರಿ ಉತ್ಪನ್ನಗಳಿಗೆ ಜಾಗತಿಕವಾಗಿ ಬೇಡಿಕೆ ಹೆಚ್ಚಾಗಿದೆ ಎಂದರು.
.ಟೆಸ್ಟ್ ಕ್ರಿಕೆಟ್: 400 ರನ್ ಹೊಡೆದಿದ್ದ ಲಾರಾ ದಾಖಲೆಗೆ ಬಂತಾ ಕುತ್ತು?.ರೈಲು ನಿಲ್ದಾಣದಲ್ಲಿ ಹೆರಿಗೆ ಮಾಡಿಸಿದ್ದ ಮೇಜರ್ಗೆ ಸೇನೆಯ ಜನರಲ್ ಮೆಚ್ಚುಗೆ.
ಜಗತ್ತು ನಮ್ಮ ರಕ್ಷಣಾ ವಲಯದತ್ತ ನೋಡುತ್ತಿದೆ. ನಾವು ಆಮದು ಮಾಡಿಕೊಳ್ಳುತ್ತಿದ್ದ ಹೆಚ್ಚಿನ ಉಪಕರಣಗಳು ಈಗ ಭಾರತದಲ್ಲಿಯೇ ತಯಾರಾಗುತ್ತಿವೆ. ಬದ್ಧತೆಯಿಂದಾಗಿ ನಮ್ಮ ಸುಧಾರಣೆಗಳು ಯಶಸ್ವಿಯಾಗುತ್ತಿವೆ ಎಂದು ಸಿಂಗ್ ಹೇಳಿದ್ದಾರೆ.

ರಕ್ಷಣಾ ಸಚಿವರು ಡಿಎಡಿಯ ಹೊಸ ಧ್ಯೇಯವಾಕ್ಯ ಎಚ್ಚರ, ಚುರುಕು, ಹೊಂದಿಕೊಳ್ಳುವಿಕೆಯನ್ನು ಶ್ಲಾಘಿಸಿದರು. ಇವು ಕೇವಲ ಪದಗಳಲ್ಲ, ವೇಗವಾಗಿ ಅಭಿವೃದ್ಧಿ ಹೊಂದಿರುವ ರಕ್ಷಣಾ ವ್ಯವಸ್ಥೆಗೆ ಹೊಂದಿಕೊಂಡು ಕಾರ್ಯನಿರ್ವಹಿಸುವುದು ಅಗತ್ಯವಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.
.ನಾಗಾಲ್ಯಾಂಡ್ನಲ್ಲಿ ಭಾರಿ ಮಳೆ: ಮೂವರು ಸಾವು, ವಿಮಾನ ಹಾರಾಟ ಸ್ಥಗಿತ.ಬಿಹಾರ ವಿಧಾನಸಭಾ ಚುನಾವಣೆ: RJDಗೆ ಸಮಾಜವಾದಿ ಪಕ್ಷ ಸಂಪೂರ್ಣ ಬೆಂಬಲ; ಅಖಿಲೇಶ್ .
'ಶಾಂತಿ' ಸಮಯ ಎನ್ನುವುದು ಕೇವಲ ಭ್ರಮೆ ಅಷ್ಟೇ. ಶಾಂತಿಯನ್ನು ಪರಿಪಾಲನೆ ಮಾಡಿದರೂ ಕೆಲವು ಸಂದರ್ಭಗಳಲ್ಲಿ ನಾವು ಅನಿಶ್ಚಿತತೆಯ ಸಮಯಕ್ಕೂ ಸಿದ್ಧರಾಗಿರಬೇಕು. ಹಠಾತ್ ಬೆಳವಣಿಗೆಗಳು ಕಾರ್ಯಾಚರಣೆಯಲ್ಲಿ ಸಂಪೂರ್ಣ ಬದಲಾವಣೆಯನ್ನು ತರಬಹುದು ಎಂದು ಸಿಂಗ್ ಹೇಳಿದ್ದಾರೆ.

ರಕ್ಷಣಾ ಕ್ಷೇತ್ರದ ಹೆಚ್ಚುತ್ತಿರುವ ಕಾರ್ಯತಂತ್ರ ಮತ್ತು ಆರ್ಥಿಕತೆಯಿಂದಾಗಿ ರಕ್ಷಣಾ ವೆಚ್ಚವನ್ನು ಕೇವಲ ಖರ್ಚು ಎಂಬ ಗ್ರಹಿಕೆಯಿಂದ ಹೂಡಿಕೆಯತ್ತ ಬದಲಾಯಿಸಬೇಕೆಂದು ಸಿಂಗ್ ತಿಳಿಸಿದ್ದಾರೆ.
.ಭಯೋತ್ಪಾದನೆಯ ಪೋಷಕರು, ಸಂತ್ರಸ್ತರನ್ನು ಒಂದೇ ತಕ್ಕಡಿಯಲ್ಲಿ ತೂಗಲು ಆಗದು: ಮೋದಿ.ಮತದಾರರ ಪಟ್ಟಿ ಪರಿಷ್ಕರಣೆ: ಚು. ಆಯೋಗದ ವಿರುದ್ಧದ ಅರ್ಜಿಗಳ ವಿಚಾರಣೆಗೆ SC ಸಮ್ಮತಿ.ನೆಲಮಂಗಲ | ಮಾಜಿ ಪ್ರೇಯಸಿಗೆ ಅಶ್ಲೀಲ ಸಂದೇಶ: ಯುವಕನನ್ನು ವಿವಸ್ತ್ರಗೊಳಿಸಿ ಹಲ್ಲೆ.ಮಂತ್ರಾಲಯ, ಆಂಜನೇಯ ಸ್ವಾಮಿ ದರ್ಶನ ಪಡೆದ ಯುವ ರಾಜ್ಕುಮಾರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.