ನವದೆಹಲಿ/ಗುರುದಾಸ್ಪುರ: ‘ಎಕೆ ಸರಣಿಯ ಬಂದೂಕುಗಳು ಹಾಗೂ ಮೂರು ಡಜನ್ ಸುತ್ತಿಗಿಂತಲೂ ಹೆಚ್ಚಿನ ಮದ್ದುಗುಂಡುಗಳನ್ನು ಹೊತ್ತು ಭಾರತಕ್ಕೆ ಪ್ರವೇಶಿಸಿದ್ದ ಪಾಕಿಸ್ತಾನದ ಡ್ರೋನ್ ಅನ್ನು ಪಂಜಾಬ್ನ ಅಂತರರಾಷ್ಟ್ರೀಯ ಗಡಿ ಬಳಿ ಬಿಎಸ್ಎಫ್ ಯೋಧರು ಹೊಡೆದುರುಳಿಸಿದ್ದಾರೆ’ ಎಂದು ವಕ್ತಾರರೊಬ್ಬರು ತಿಳಿಸಿದ್ದಾರೆ.