ಅಮೃತಸರ: ಇಲ್ಲಿನ ಭಾರತ – ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿಮೂಲಕ ಮಾದಕವಸ್ತುಗಳೊಂದಿಗೆ ಅಕ್ರಮವಾಗಿ ಭಾರತದೊಳಕ್ಕೆ ನುಸುಳುತ್ತಿದ್ದ ಪಾಕಿಸ್ತಾನದ ಕಳ್ಳಸಾಗಣೆದಾರನ್ನು ಪಂಜಾಬ್ ಪೊಲೀಸ್ ಮತ್ತು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧರು ಜಂಟಿ ಕಾರ್ಯಾಚರಣೆ ನಡೆಸಿ ಗುಂಡಿಕ್ಕಿ ಕೊಂದಿದ್ದಾರೆ.

ಪಾಕಿಸ್ತಾನದ ಕಳ್ಳಸಾಗಣೆದಾರ ಸುಮಾರು 22 ಕೆಜಿ ತೂಕದ 22 ಪೊಟ್ಟಣಗಳ ಹೆರಾಯಿನ್‌ನೊಂದಿಗೆ ಇಲ್ಲಿನ ಅಂತರರಾಷ್ಟ್ರೀಯ ಗಡಿ ಮೂಲಕ ಭಾರತದೊಳಗೆ ನುಸುಳುತ್ತಿದ್ದ. ಖಚಿತ ಮಾಹಿತಿಯೊಂದಿಗೆ ಎಸ್‌ಎಸ್‌ಪಿ ಧ್ರುವಾ ದಹಿಯಾ ನೇತೃತ್ವದ ಪಂಜಾಬ್ ಪೊಲೀಸ್ ತಂಡ ಮತ್ತು ಗಡಿ ಭದ್ರತಾ ಪಡೆಗಳು ಕಕ್ಕರ್ ಗಡಿ ಔಟ್‌ಪೋಸ್ಟ್‌ನಲ್ಲಿ ಜಂಟಿ ಕಾರ್ಯಾಚರಣೆ ಆರಂಭಿಸಿದರು.

ಜಂಟಿ ಕಾರ್ಯಾಚರಣೆಯಲ್ಲಿ ಗಡಿ ಭಾಗದಲ್ಲಿ ಪಾಕಿಸ್ತಾನಿ ಕಳ್ಳಸಾಗಣೆದಾರರನ ಚಲನವಲವನ್ನು ಭದ್ರತಾ ಸಿಬ್ಬಂದಿ ಗುರುತಿಸಿದ್ದರು. ಈ ವೇಳೆ ಕಳ್ಳಸಾಗಣೆದಾರ ಭದ್ರತಾ ಸಿಬ್ಬಂದಿ ಮೇಲೆ ಗುಂಡು ಹಾರಿಸಿದ. ಇದಕ್ಕೆ ಪ್ರತಿಯಾಗಿ ಆತನ ಮೇಲೆ ಧ್ರುವಾ ನೇತೃತ್ವದ ಯೋಧರ ಪಡೆ ಗುಂಡಿನ ದಾಳಿ ನಡೆಸಿ, ಆತನನ್ನು ಹತ್ಯೆ ಮಾಡಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹತ್ಯೆಯಾದ ವ್ಯಕ್ತಿಯಿಂದ 22 ಕೆ.ಜಿ ತೂಕದ ಹೆರಾಯಿನ್, ಎರಡು ಎಕೆ 47 ರೈಫಲ್ಸ್, 4 ಮ್ಯಾಗಜಿನ್ಸ್, ಪಾಕಿಸ್ತಾನದ ಸಿಮ್‌ಕಾರ್ಡ್ ಇರುವ ಒಂದು ಮೊಬೈಲ್ ಫೋನ್ ಮತ್ತು ₹210 ನಗದು (ಪಾಕಿಸ್ತಾನದ ಕರೆನ್ಸಿ) ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.