ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಬಂಗಾಳ | ಪಂಚಾಯತ್‌ ಚುನಾವಣೆ; 696 ಮತಗಟ್ಟೆಗಳಲ್ಲಿ ಮರು ಮತದಾನ ಆರಂಭ

Published 10 ಜುಲೈ 2023, 3:10 IST
Last Updated 10 ಜುಲೈ 2023, 3:10 IST
ಅಕ್ಷರ ಗಾತ್ರ

ಕೋಲ್ಕತ್ತ: ಮತಯಂತ್ರಗಳನ್ನು ವಿರೂಪಗೊಳಿಸಿದ ಆರೋಪದಡಿ ಮರು ಮತದಾನಕ್ಕೆ ಪಶ್ಚಿಮ ಬಂಗಾಳ ರಾಜ್ಯ ಚುನಾವಣಾ ಆಯೋಗ ಮುಂದಾಗಿದ್ದು, ಇಂದು 19 ಜಿಲ್ಲೆಗಳ 696 ಮತಗಟ್ಟೆಗಳಲ್ಲಿ ಮರು ಮತದಾನ ಆರಂಭಗೊಂಡಿದೆ.

ಇಂದು ಬೆಳಿಗ್ಗೆ 7 ಗಂಟೆಯಿಂದ ಮರು ಮತದಾನ ಆರಂಭಗೊಂಡಿದ್ದು, ಎಲ್ಲ ಮತಗಟ್ಟೆಗಳಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ಕೇಂದ್ರ ಪಡೆಯ ನಾಲ್ವರು ಸಿಬ್ಬಂದಿ ಸೇರಿದಂತೆ ರಾಜ್ಯ ಪೊಲೀಸರನ್ನು ಮತಗಟ್ಟೆಗಳಿಗೆ ನಿಯೋಜಿಸಲಾಗಿದೆ. ಸಂಜೆ ಐದು ಗಂಟೆಯವರೆಗೆ ಮರು ಮತದಾನ ನಡೆಯಲಿದೆ.

‘ಮರು ಮತದಾನ ನಡೆಯುತ್ತಿರುವ 696 ಮತಗಟ್ಟೆಗಳಲ್ಲಿ ಮತಯಂತ್ರಗಳನ್ನು ವಿರೂಪಗೊಳಿಸಿದ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಪರಿಶೀಲನೆ ನಡೆಸಿದ ರಾಜ್ಯ ಚುನಾವಣಾ ಆಯೋಗ, ಸೋಮವಾರ ಮರು ಮತದಾನ ಮಾಡುವುದಾಗಿ ಪ್ರಕಟಣೆ ಹೊರಡಿಸಿತ್ತು‘ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಮರು ಮತದಾನ ನಡೆಯುತ್ತಿರುವ ಜಿಲ್ಲೆಗಳ ಪೈಕಿ ಹಿಂಸಾಚಾರ ಪೀಡಿತ ಮುರ್ಷಿದಾಬಾದ್‌ನಲ್ಲಿ ಅತಿ ಹೆಚ್ಚು ಅಂದರೆ 175 ಮತಗಟ್ಟೆಗಳಿವೆ. ಮಾಲ್ಡಾ ಜಿಲ್ಲೆ 109 ಮತಗಟ್ಟೆಗಳನ್ನು ಹೊಂದಿದೆ. ಉಳಿದಂತೆ ನಾಡಿಯಾದಲ್ಲಿ 89 ಮತಗಟ್ಟೆಗಳು, ಕೂಚ್ ಬೆಹಾರ್ 53, ಉತ್ತರ 24 ಪರಗಣಗಳು 46, ಉತ್ತರ ದಿನಜ್‌ಪುರ 42, ದಕ್ಷಿಣ 24 ಪರಗಣಗಳು 36, ಪುರ್ಬಾ ಮೇದಿನಿಪುರ 31 ಮತ್ತು ಹೂಗ್ಲಿ 29 ಮತಗಟ್ಟೆಗಳನ್ನು ಹೊಂದಿವೆ‘ ಎಂದು ತಿಳಿಸಿದ್ದಾರೆ.

ಶನಿವಾರ ರಾಜ್ಯದ 61 ಸಾವಿರ ಮತಗಟ್ಟೆಗಳಲಿ ಮತದಾನ ನಡೆದಿತ್ತು. ಈ ವೇಳೆ ಹಲವು ಮತಗಟ್ಟೆಗಳಲ್ಲಿ ಹಿಂಸಾಚಾರ ನಡೆದಿದ್ದವು. ಇಲ್ಲಿಯವರೆಗೆ 15 ಜನರು ಮೃತಪಟ್ಟಿದ್ದಾರೆ. ಮತಯಂತ್ರಗಳನ್ನು ವಿರೂಪಗೊಳಿಸಿ, ಬೆಂಕಿ ಹಚ್ಚಿ ಕೆರೆಗಳಿಗೆ ಎಸೆದ ಪ್ರಕರಣಗಳು ಕಂಡುಬಂದಿದ್ದವು.

ಡಾರ್ಜಿಲಿಂಗ್, ಜಾರ್‌ಗ್ರಾಮ್ ಮತ್ತು ಕಾಲಿಂಪಾಂಗ್ ಜಿಲ್ಲೆಗಳಲ್ಲಿ ಮರು ಮತದಾನಕ್ಕೆ ಆದೇಶ ನೀಡಲಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT